ಮತದಾರರ ದೃಢೀಕರಣಕ್ಕೆ ಫಾಮ್-6ಬಿ: ತಹಸೀಲ್ದಾರ್ ಎಂ.ಬಸವರಾಜ ಹೇಳಿಕೆ

020822 Karatagi Meeting on Voter id
ಕಾರಟಗಿಯ ತಹಸಿಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಮತದಾರರ ಗುರುತಿನ ಚೀಟಿಗೆ ಆಧಾರ ಸಂಖ್ಯೆ ಜೋಡಣೆ, ದೃಢೀಕರಿಸಲು ಹಾಗೂ ಮತದಾರರಿಂದ ದತ್ತಾಂಶ ಸಂಗ್ರಹ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ಬಸವರಾಜ ಸೋಮವಾರ ಮಾತನಾಡಿದರು.
Published on

ಕಾರಟಗಿ: ಕೇಂದ್ರ ಚುನಾವಣಾ ಆಯೋಗ ವಿಧಾನಸಭೆ, ಲೋಕಸಭೆ ಮತಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆ ತರಲು ಮುಂದಾಗಿದೆ ಎಂದು ತಹಸೀಲ್ದಾರ್ ಎಂ.ಬಸವರಾಜ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ, ದೃಢೀಕರಿಸಲು ಹಾಗೂ ಮತದಾರರಿಂದ ದತ್ತಾಂಶ ಸಂಗ್ರಹ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಮತದಾರರ ಪಟ್ಟಿಯಲ್ಲಿನ ಮತದಾರರ ದೃಢೀಕರಣ ಉದ್ದೇಶದಿಂದ ನಮೂನೆ-6 ಬಿ ಅನ್ನು ಜಾರಿಗೆ ತಂದಿದ್ದು, ಪಟ್ಟಿಯಲ್ಲಿ ನೋಂದಣಿ ಆಗಿರುವ ಮತದಾರರು ತಮ್ಮ ಆಧಾರ್ ಸಂಖ್ಯೆ ಜೋಡಿಸಿ ದೃಢೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬಸವರಾಜ ತಿಳಿಸಿದರು.

ಆಧಾರ್ ಕಾರ್ಡ್ ಒದಗಿಸದಿದ್ದಲ್ಲಿ ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಕಾರ್ಮಿಕ ಮಂತ್ರಾಲಯದಿಂದ ನೀಡುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾನ್‌ಕಾರ್ಡ್, ಪಾಸ್‌ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುರುತಿನ ಚೀಟಿ ಸೇರಿದಂತೆ ಯಾವುದಾದರೂ ಒಂದನ್ನು ನಮೂನೆ 6 ಬಿನಲ್ಲಿ ಮಾಹಿತಿ ದೃಢೀಕರಿಸಲು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅವಕಾಶವಿದೆ. ಅಲ್ಲದೆ ಸಂಬಂಧಪಟ್ಟ ಬೂತ್ ಲೆವಲ್ ಅಧಿಕಾರಿಗಳಲ್ಲಿಯೂ ಅರ್ಜಿ ಪಡೆದು ಭರ್ತಿಗೊಳಿಸಿ ಮತದಾರರ ನೋಂದಣಾಧಿಕಾರಿ ಕಚೇರಿಗ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net