ದುಶ್ಚಟಗಳ ತ್ಯಜಿಸಿ ಸುಂದರ ಜೀವನ ರೂಪಿಸಿಕೊಳ್ಳಿ

25knk1
Published on

ಕನಕಗಿರಿ: ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಧೂಮಪಾನ, ಮದ್ಯಪಾನದಂತಹ ದುಶ್ಚಟಗಳನ್ನು ಯುವಕರು ತ್ಯಜಿಸಿ ಸುಂದರ ಜೀವನ ಕಟ್ಟಿಕೊಳ್ಳಬೇಕು ಎಂದು ಡಾ.ಚನ್ನಮಲ್ಲ ಸ್ವಾಮೀಜಿ ಸಲಹೆ ನೀಡಿದರು.

ಜಗಜ್ಯೋತಿ ಬಸವೇಶ್ವರರ 890ನೇ ಜಯಂತ್ಯುತ್ಸವ ನಿಮಿತ್ತ ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಹಮ್ಮಿಕೊಂಡಿರುವ ಅಧ್ಯಾತ್ಮ ಪ್ರವಚನದ ಭಾಗವಾಗಿ ಶನಿವಾರ ಮುಸಲಾಪುರದಲ್ಲಿ ದುಶ್ಚಟಗಳ ತಡೆಗೆ ಜೋಳಿಗೆ ಹಿಡಿದು ಭಿಕ್ಷಾಟನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಕರು ದುಶ್ಚಟಗಳಿಗೆ ದಾಸರಾದರೆ ಹಣದ ಜತೆಗೆ ಆರೋಗ್ಯ ಹದಗೆಡಲಿದೆ. ಇದು ಕುಟುಂಬಸ್ಥರ ನೆಮ್ಮದಿಯೊಂದಿಗೆ ಗ್ರಾಮದ ಪರಿಸರವೂ ಹಾಳಾಗಲು ಕಾರಣವಾಗುತ್ತದೆ. ಮದ್ಯಪಾನ ಅಭ್ಯಾಸದಿಂದ ಕೆಲವರು ಕಳ್ಳತನಕ್ಕೂ ಮುಂದಾಗುತ್ತಿದ್ದಾರೆ. ಕುಡಿದ ಮಬ್ಬಿನಲ್ಲಿ ಕೊಲೆಯಂತಹ ಘಟನೆಗಳು, ಕುಡಿದು ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿರುವ ಸಾಕಷ್ಟು ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ಇಂತಹ ದುಶ್ಚಟಗಳನ್ನು ಯುವಕರಿಂದ ಬಿಡಿಸಲು ಇಳಕಲ್ ಮಹಾಂತ ಶಿವಯೋಗಿಗಳಂತೆ ಶ್ರೀಮಠ ಹಾಗೂ ಭಕ್ತರ ಸಹಯೋಗದಲ್ಲಿ ಈ ಭಾಗದಲ್ಲಿ ಜೋಳಿಗೆ ಹಿಡಿದು ಭಿಕ್ಷೆ ಬೇಡಲಾಗುತ್ತಿದೆ. ಅಲ್ಲದೆ ದುಶ್ಚಟ ತೊರೆದವರು ದೇವರ ಸ್ಮರಣೆ, ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net