ಕನಕದಾಸರ ಕಂಚಿನ ಪುತ್ಥಳಿಗೆ 5 ಲಕ್ಷ ರೂ. ನೀಡುವ ಭರವಸೆ

Kanakadasa, Kanchina Putthali, Sindagi, Shantaveera Biradara, Rajanna Narayankara, Tehsildar, Pradeepakumar Hiremath,
ಸಿಂದಗಿ ಪಟ್ಟಣದಲ್ಲಿ ಕನಕದಾಸರ ಪುತ್ಥಳಿಗೆ ಶಾಸಕ ಅಶೋಕ ಮನಗೂಳಿ ನಮನ ಸಲ್ಲಿಸಿದರು. ಶಾಂತವೀರ ಬಿರಾದಾರ, ನಿಂಗಣ್ಣ ಬಿರಾದಾರ, ರಾಜಣ್ಣ ನಾರಾಯಣಕರ ಇತರರಿದ್ದರು.
Published on

ಸಿಂದಗಿ: ನಗರದಲ್ಲಿನ ಕನಕದಾಸ ವೃತ್ತವನ್ನು ವಿನೂತನವಾಗಿ ನಿರ್ಮಾಣ ಮಾಡಲು ಹಾಗೂ ಕನಕದಾಸರ ಕಂಚಿನ ಪುತ್ಥಳಿಗೆ ವೈಯಕ್ತಿಕವಾಗಿ 5 ಲಕ್ಷ ರೂ. ಅನುದಾನ ಒದಗಿಸುವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.

ನಗರದ ಕನಕದಾಸ ವೃತ್ತದಲ್ಲಿ ಕನಕದಾಸರ ಜಯಂತಿ ನಿಮಿತ್ತ ಪುತ್ಥಳಿಗೆ ಸೋಮವಾರ ಪುಷ್ಪಾರ್ಚನೆಗೈದು ಅವರು ಮಾತನಾಡಿದರು.

ಕನಕದಾಸರ ಕೀರ್ತನೆ ಮತ್ತು ಚಿಂತನೆ ಸಮಾಜದ ಡೊಂಕನ್ನು ತಿದ್ದುವಂಥವಾಗಿದ್ದವು. ಯುವಕರು ಶರಣರ, ಸಂತರ, ದಾಸರ ಬದುಕನ್ನು ಆಶ್ರಯಿಸಿ ತಮ್ಮ ಬದುಕನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.

ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ, ಪ್ರಕಾಶ ಹಿರೇಕುರುಬರ, ನಿಂಗಣ್ಣ ಬಿರಾದಾರ, ಕೆಂಚಪ್ಪ ಪೂಜಾರಿ, ಶರಣಪ್ಪ ಪೂಜಾರಿ, ಸುರೇಶ ಪೂಜಾರಿ, ಸುರೇಶ ಮಳಲಿ, ಜಯಶ್ರೀ ಹದನೂರು, ಸುನಂದಾ ಯಂಪುರೆ, ವರ್ಷಾ ಪಾಟೀಲ ಸೇರಿ ಸಮಾಜ ಬಾಂಧವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net