ಕಲಬುರಗಿ: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಏಕ್ ಭಾರತ್-ಶ್ರೇಷ್ಠ ಭಾರತ್ ಉಪಕ್ರಮದಡಿ ಆಯೋಜಿಸಿದ್ದ ಯುವ ಸಂಗಮದ 7ನೇ ಹಂತದ ಕರ್ನಾಟಕ ಪ್ರವಾಸ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸೆ.28ರಿಂದ ಅ.3ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ 51 ಸದಸ್ಯರ ನಿಯೋಗ ಭಾಗವಹಿಸಿದ್ದು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆತಿಥ್ಯ ವಹಿಸಿತ್ತು.
ಬೀದರ್ ಕೋಟೆ, ಗುರುದ್ವಾರ ನಾನಕ್ ಝಿರಾ ಸಾಹೀಬ್ ಹಾಗೂ ಬಿದ್ರಿ ಕಲಾ ಕೇಂದ್ರಗಳಿಗೆ ಭೇಟಿ ನೀಡಿ ಪದ್ಮಶ್ರೀ ಪುರಸತ ಖ್ಯಾತ ಬಿದ್ರಿ ಕಲಾವಿದ ಶಾ ರಶೀದ್ ಅಹಮದ್ ಖಾದ್ರಿ ಜತೆ ನಿಯೋಗ ಸಂವಾದ ನಡೆಸಿತಲ್ಲದೆ ಬೀದರ್ನ ಇತಿಹಾಸ, ವಾಸ್ತುಶಿಲ್ಪ ಮತ್ತು ಬಿದ್ರಿ ಕಲಾ ಪರಂಪರೆ ಕುರಿತು ತಿಳಿದುಕೊಳ್ಳಲಾಯಿತು.
ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂಬಿ) ಹಾಗೂ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಶೈಕ್ಷಣಿಕ ವ್ಯವಸ್ಥೆ, ವೈಜ್ಞಾನಿಕ ಸಂಶೋಧನೆ ಹಾಗೂ ತಾಂತ್ರಿಕ ಪ್ರಗತಿ ಕುರಿತು ಮಾಹಿತಿ ಪಡೆಯಲಾಯಿತು.
ಬೆಂಗಳೂರು ಲೋಕಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಜತೆ ಸಂವಾದ ನಡೆಸಲಾಯಿತು. ಈ ವೇಳೆ ಕರ್ನಾಟಕದ ಸಾಂಸತಿಕ ಪರಂಪರೆ, ಐತಿಹಾಸಿಕ ವೈಶಿಷ್ಟ, ಪ್ರವಾಸೋದ್ಯಮ ಹಾಗೂ ರಾಜ್ಯ ಸರ್ಕಾರ ಮತ್ತು ಲೋಕಭವನದ ಆಡಳಿತ ವೈಖರಿ, ಸಾರ್ವಜನಿಕ ಆಡಳಿತ ಕುರಿತು ತಿಳಿದುಕೊಳ್ಳಲಾಯಿತು.
ದೇಶದ ಪ್ರತಿಷ್ಠಿತ ಇಸ್ರೋ ಟೆಲಿಮೆಟ್ರಿ, ಟ್ರಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ಹಾಗೂ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ಗೂ ಭೇಟಿ ನೀಡಿ ಭಾರತದ ಬಾಹ್ಯಾಕಾಶ ವಿಜ್ಞಾನ, ಗಗನಯಾನ, ಚಂದ್ರಯಾನ ಮತ್ತು ನಿಸಾರ್ ಸೇರಿ ಪ್ರಮುಖ ಯೋಜನೆ ಮತ್ತು ಸ್ವದೇಶಿ ಬಾಹ್ಯಾಕಾಶ ತಂತ್ರಜ್ಞಾನ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು.
ಕೃಷಿ&ಪ್ರಾದೇಶಿಕ ಆರ್ಥಿಕತೆ: ದೇಶದ ತೊಗರಿ ಕಣಜ ಕಲಬುರಗಿಯ ತೊಗರಿ ಬೇಳೆ ಸಂಸ್ಕರಣಾ ಟಕಕ್ಕೆ ಭೇಟಿ ನೀಡಿದ ನಿಯೋಗ, ತೊಗರಿ ಉತ್ಪಾದನೆ, ಸಂಸ್ಕರಣಾ ಪ್ರಕ್ರಿಯೆ ಹಾಗೂ ಕೃಷಿ ಆಧಾರಿತ ಆರ್ಥಿಕತೆ ಕುರಿತು ಮಾಹಿತಿ ಪಡೆಯಿತು. ಜಿಐ ಮಾನ್ಯತೆ ಪಡೆದ ತೊಗರಿ ಬೇಳೆ ವೈಶಿಷ್ಟ ಮತ್ತು ಪ್ರಾದೇಶಿಕ ಆರ್ಥಿಕತೆಯಲ್ಲಿ ಅದರ ಮಹತ್ವ ಅರಿಯಲಾಯಿತು. ಕೃಷಿ, ಸ್ಥಳಿಯ ಜೀವನೋಪಾಯ ಮತ್ತು ಆರ್ಥಿಕ ಅಭಿವೃದ್ಧಿ ನಡುವಿನ ಸಂಬಂಧ ಅರಿಯಲು ಈ ಭೇಟಿ ಮತ್ತಷ್ಟು ಸಹಕಾರಿ ಆಯಿತು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಾಂಸತಿಕ ಕಾರ್ಯಕ್ರಮದೊಂದಿಗೆ ಯುವಸಂಗಮ 7ನೇ ಹಂತ ಮುಕ್ತಾಯಗೊಂಡಿತು. ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್, ಕಾನೂನು ನಿಕಾಯ ಮತ್ತು ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ.ಬಸವರಾಜ ಕುಬಕಡ್ಡಿ ಮುಖ್ಯ ಅತಿಥಿಯಾಗಿದ್ದರು. ಸಿಯುಕೆ ವಿದ್ಯಾರ್ಥಿಗಳು ಸಾಂಸತಿಕ ನೃತ್ಯ ಹಾಗೂ ಮಧ್ಯಪ್ರದೇಶದ ನಿಯೋಗ ಸದಸ್ಯರು ಸಾಂಪ್ರದಾಯಿಕ ಮತ್ತು ಬುಡಕಟ್ಟು ನೃತ್ಯ ಪ್ರದರ್ಶಿಸಿದರು. ಎರಡೂ ರಾಜ್ಯಗಳ ಸಾಂಸತಿಕ ವೈವಿಧ್ಯ ಮತ್ತು ಪರಂಪರೆ ಪರಿಚಯಕ್ಕೆ ಈ ವೇದಿಕೆ ಸಾಯಾಯಿತು. ಮಧ್ಯಪ್ರವೇಶ ನಿಯೋಗದ ಸದಸ್ಯರು ಕರ್ನಾಟಕ ಪ್ರವಾಸದ ಅನುಭವ ಹಂಚಿಕೊಂಡರು. ಯುವ ಸಂಗಮದ 7ನೇ ಹಂತದ ನೋಡಲ್ ಅಧಿಕಾರಿ ಡಾ.ಎಂ.ಶಿವ, ಕಾರ್ಯಕ್ರಮ ಸಂಯೋಜಕ ಡಾ.ಜಗದೀಶ ಬಿರಾದಾರ್ ನೇತೃತ್ವ ವಹಿಸಿದ್ದರು. ಸಾಂಸತಿಕ ವಿನಿಮಯ, ಯುವಜನರ ಪರಸ್ಪರ ಸಂವಾದ ಮತ್ತು ರಾಷ್ಟ್ರೀಯ ಏಕೀಕರಣ ಆಶಯ ಬಲಪಡಿಸಿದ ಪ್ರವಾಸದ ಬಳಿಕ ನಿಯೋಗ ಮಧ್ಯಪ್ರದೇಶಕ್ಕೆ ಪ್ರಯಾಣ ಬೆಳೆಸಿತು.