ಕಾರ್ಮಿಕರೇ ಯೋಜನೆಗಳ ಲಾಭ ಪಡೆಯಿರಿ

ಅಫಜಲಪುರ ತಾಲೂಕಿನ ಬಂದರವಾಡದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಗ್ರಾಮ ಘಟಕವನ್ನು ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಉದ್ಘಾಟಿಸಿದರು. ಶ್ರೀ ವೀರ ಮಹಾಂತ ಶಿವಾಚಾರ್ಯ, ಮಹಮ್ಮದ್​ ಮುತ್ಯಾ, ಸುರೇಶ ತಿಬಶೆಟ್ಟಿ ಇತರರಿದ್ದರು.
ಅಫಜಲಪುರ ತಾಲೂಕಿನ ಬಂದರವಾಡದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಗ್ರಾಮ ಘಟಕವನ್ನು ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಉದ್ಘಾಟಿಸಿದರು. ಶ್ರೀ ವೀರ ಮಹಾಂತ ಶಿವಾಚಾರ್ಯ, ಮಹಮ್ಮದ್​ ಮುತ್ಯಾ, ಸುರೇಶ ತಿಬಶೆಟ್ಟಿ ಇತರರಿದ್ದರು.
Published on: 

ಅಫಜಲಪುರ: ದೇಶದ ಪ್ರಗತಿ ಹಾಗೂ ಸಮಾಜದಲ್ಲಿನ ಮೂಲಸೌಕರ್ಯ ರೂಪುಗೊಳ್ಳಲು ಶ್ರಮಿಸುವ ಕಟ್ಟಡ ಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಹೇಳಿದರು.

ಬಂದರವಾಡದಲ್ಲಿ ರಾಜ್ಯ ಕಟ್ಟಡ ಕಾರ್ಮಿಕರ ಸಂಘ ಶುಕ್ರವಾರ ಏರ್ಪಡಿಸಿದ್ದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಶ್ರಮಿಕರ ಬದುಕಿಗೆ ಆಧಾರ ನೀಡಲು ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅರ್ಹರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶ್ರೀ ವೀರ ಮಹಾಂತ ಶಿವಾಚಾರ್ಯ ಆಶೀರ್ವಚನ ನೀಡಿ, ಬಸವಣ್ಣನವರ ಕಾಯಕ ತತ್ವ ಅಳವಡಿಸಿಕೊಂಡು ಬೆವರಿನ ಹನಿಗಳಿಂದ ಸುಂದರ ಸಮಾಜ ಕಟ್ಟುತ್ತಿರುವ ನಿಮ್ಮ ಸೇವೆ ಸದಾ ಸ್ಮರಣೀಯ ಎಂದು ಕೊಂಡಾಡಿದರು.

ಮಹಮ್ಮದ್​ ಮುತ್ಯಾ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸುರೇಶ ತಿಬಶೆಟ್ಟಿ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮೋಸಿನ್​ ಪಟೇಲ್​, ಪ್ರಮುಖರಾದ ಶಿವು ಬೆಳಗುಂಪಿ, ಶಂಕರ ಕಟ್ಟಿಸಂಗಾವಿ, ಹೊನ್ನಪ್ಪ ಸುಂಬಡ, ಮಹಿಬೂಬ್​ ಖಾನ್​, ದತ್ತು ಪಾಟೀಲ್​, ಯಲ್ಲಪ್ಪ ಕುರುಡೆ, ಜಿಲಾನಿ ಗೌರ, ಕಾಂತಪ್ಪ ಜೇವರ್ಗಿ, ಅನುರಾಧ ಗೌಡ, ಜಗನ್ನಾಥ ಬೆಳಗುಂಪಿ, ಇಮಾಮ್​ ಪಟೇಲ್​, ಭೀಮಶಾ ಹೂವಿನಳ್ಳಿ, ಮಹಾಂತೇಶ ಕಡಗಂಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net