

ಚಿಂಚೋಳಿ: ವನ್ಯಜಿವಿಗಳ ಸಂರಕ್ಷಣೆ ಕೇವಲ ಇಲಾಖೆ ಜವಾಬ್ದಾರಿಯಲ್ಲ, ಪ್ರತಿ ನಾಗರಿಕನ ಆದ್ಯ ಕರ್ತವ್ಯ ಎಂದು ಜಿಲ್ಲಾ ಅರಣ್ಯಾಧಿಕಾರಿ ಆಶೀಷ್ ರೆಡ್ಡಿ ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರಾದೇಶಿಕ ಅರಣ್ಯ ಇಲಾಖೆ ಹಾಗೂ ವನ್ಯಜಿವಿ ವಲಯದ ಸಂಯುಕ್ತಾಶ್ರಯದಲ್ಲಿ 72ನೇ ವನ್ಯಜಿವಿ ಸಪ್ತಾಹ ನಿಮಿತ್ತ ವನ್ಯಜಿವಿ ಸಂರಕ್ಷಣೆಗಾಗಿ ಗುರುವಾರ ಹಮ್ಮಿಕೊಂಡಿದ್ದ 10 ಕಿಮೀ. ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಕಾಡು ಮತ್ತು ವನ್ಯಜಿವಿ ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚುತ್ತಿರುವುದು ಕಳವಳಕಾರಿ. ಇದಕ್ಕೆ ಕಡಿವಾಣ ಹಾಕಲು ಸಾರ್ವಜನಿಕರ ಸಹಕಾರ ಅಗತ್ಯ. ಯುವ ಜನತೆ ಹಾಗೂ ವಿದ್ಯಾರ್ಥಿಗಳು ವನ್ಯಜಿವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾತನಾಡಿದರು.
ಪ್ರಮುಖರಾದ ಸಾಗರ ತವಡೆ, ರೇಣುಕಾ, ವಿ.ಎಸ್.ಡಾಂಗೆ, ಸುನೀಲಕುಮಾರ ಚವ್ಹಾಣ್, ಎಂ.ಎಲ್.ಬಾವಿಕಟ್ಟಿ, ಆರ್.ಆರ್.ಯಾದವ್, ಸಂಜುಕುಮಾರ ಚವ್ಹಾಣ್, ಜಗನ್ನಾಥ ಕೊರಳ್ಳಿ, ವಿಜಯಕುಮಾರ, ಸಿದ್ದರೂಢ, ಶಿವಾನಂದ, ಸಂತೋಷಕುಮಾರ ಚವ್ಹಾಣ್, ಸುಬ್ಬಣ್ಣ ಜಮಖಂಡಿ, ಅಮರ ಕುಲಕರ್ಣಿ, ಗಂಗಮ್ಮ, ಜಗನ್ನಾಥ ಚಟ್ನಳ್ಳಿ, ಅಶೋಕ ಚವ್ಹಾಣ್, ವಿಶ್ವನಾಥ ಹೊಡೆಬೀರನಳ್ಳಿ, ಚಂದ್ರಶೇಖರ ಗುತ್ತೇದಾರ್, ಜಗದೀಶಸಿಂಗ್ ಠಾಕೂರ್, ಗಂಗಾಧರ ಮಕಾಶಿ, ಪ್ರೇಮಸಿಂಗ್ ಜಾಧವ್, ಗೋಪಾಲ ಕಲಬಾವಿ ಇತರರಿದ್ದರು.
ವಿವಿಧ ಕಲೆ ಅನಾವರಣ
ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ 10 ಕಿಮೀ. ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ನಾಡಿನ ಸಾಂಸತಿಕ ವೈಭವ ಮೇಳೈಸಿತು. ಜಾಥಾದ ಹಾದಿಯುದ್ದಕ್ಕೂ ಪ್ರದರ್ಶನಗೊಂಡ ಸಾಂಸತಿಕ ಕಲೆಗಳು ಸಾರ್ವಜನಿಕರ ಕಣ್ಮನ ಸೆಳೆದವು. ಡೊಳ್ಳು ಕುಣಿತದ ಭರ್ಜರಿ ಹೆಜ್ಜೆ, ಮಂಗಳೂರಿನ ಖ್ಯಾತಿಯ ಹುಲಿ ವೇಷಧಾರಿಗಳ ಕಲಾತಂಡದ ರೋಮಾಂಚಕ ನೃತ್ಯ ಮನಸೂರೆಗೊಂಡಿತು. ವನ್ಯಜಿವಿಗಳ ಸಂರಣೆ ಕುರಿತು ಜಾಗೃತಿ ಮೂಡಿಸುವ ಫಲಕ ಹಾಗೂ ೂಷಣೆ ಪ್ರತಿಧ್ವನಿಸಿದವು. ಶಾಲಾ&ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳ ಜತೆಗೆ ವಿವಿಧ ಸಂ&ಸಂಸ್ಥೆಗಳ ಪದಾಧಿಕಾರಿಗಳು ವಾಕಥಾನ್ದಲ್ಲಿ ಭಾಗಿಯಾದರು.