ವನ್ಯಜಿವಿ ಸಂರಕ್ಷಣೆ ಕಡೆ ವಾಕಥಾನ್​ ನಾಳೆ

ಸಂಜೀವಕುಮಾರ
ಸಂಜೀವಕುಮಾರ
Published on: 

ಚಿಂಚೋಳಿ: ಚಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಚಂದ್ರಂಪಳ್ಳಿ ನಿಸರ್ಗ ಧಾಮವರೆಗೆ ಗುರುವಾರ ವಾಕಥಾನ್​ ಹಮ್ಮಿಕೊಳ್ಳಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ತಿಳಿಸಿದ್ದಾರೆ. ಅರಣ್ಯ ಹಾಗೂ ವನ್ಯಜಿವಿ ಸಂರಕ್ಷಣೆ ಮಹತ್ವದ ಕುರಿತು ಅರಿವು ಮೂಡಿಸುವ ಸಲುವಾಗಿ ನಮ್ಮ ಹೆಜ್ಜೆ ವನ್ಯಜಿವಿ ಸಂರಕ್ಷಣೆ ಕಡೆ ಎಂಬ ಸಂದೇಶದೊಂದಿಗೆ ಅಂದು ಬೆಳಗ್ಗೆ 6.30ಕ್ಕೆ ಸುಮಾರು 10 ಕಿಮೀ ವಾಕಥಾನ್​ ನಡೆಯಲಿದೆ. ಆಸಕ್ತರು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ (90085 70173) ಹಾಗೂ ಉಪ ವಲಯ ಅರಣ್ಯಾಧಿಕಾರಿ ಸಿದ್ದಾರೂಡ (96860 44408) ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net