ಅನ್ನದಾತನ ಕೈಹಿಡಿಯಲಿದೆ ಹಿಂಗಾರು ಮಳೆ

ಧೋತರಗಾಂವ್​ದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ವೀರಭದ್ರ ಶಿವಾಚಾರ್ಯ, ಮಾಜಿ ಶಾಸಕ ಸುಭಾಷ ಗುತ್ತೇದಾರ್​, ಆರ್​.ಕೆ.ಪಾಟೀಲ್​ ಇತರರಿದ್ದರು.
ಧೋತರಗಾಂವ್​ದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ವೀರಭದ್ರ ಶಿವಾಚಾರ್ಯ, ಮಾಜಿ ಶಾಸಕ ಸುಭಾಷ ಗುತ್ತೇದಾರ್​, ಆರ್​.ಕೆ.ಪಾಟೀಲ್​ ಇತರರಿದ್ದರು.
Published on: 

ಆಳಂದ: ಮನುಷ್ಯನ ಜೀವನದಲ್ಲಿ ಧರ್ಮ ಮತ್ತು ಸತ್ಯಕ್ಕೆ ಮಹತ್ವದ ಸ್ಥಾನವಿದೆ. ಶ್ರೀ ವೀರೇಶ್ವರ ಶರಣರು ಜನರನ್ನು ಧರ್ಮದ ಹಾದಿಯಲ್ಲಿ ನಡೆಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.

ಧೋತರಗಾಂವ್​ದ ಶ್ರೀ ವೀರೇಶ್ವರ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುರಾಣ ಮಹಾಮಂಗಲ ಮಹೋತ್ಸವ ಹಾಗೂ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜಗತ್ತಿನಲ್ಲಿ 84 ಲ ಜೀವ ರಾಶಿಗಳಿದ್ದು, ಅವುಗಳಲ್ಲಿ ಮನುಷ್ಯನಿಗೆ ವಿಶೇಷ ಜ್ಞಾನ, ವಿವೇಕ, ಹಾಗೂ ಚಿಂತನ ಶಕ್ತಿ ಭಗವಂತ ನೀಡಿದ್ದಾನೆ. ಒಳ್ಳೆಯದು-ಕೆಟ್ಟದು, ಧರ್ಮ-ಅಧರ್ಮ, ಸತ್ಯ-ಸುಳ್ಳುಗಳನ್ನು ಅರಿತು ಸರಿಯಾದ ಮಾರ್ಗದಲ್ಲಿ ನಡೆಯುವ ಗುಣ ಮನುಷ್ಯನಲ್ಲಿದೆ ಎಂದರು.

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಅನ್ನದಾತರು ಆತಂಕಕ್ಕೆ ಒಳಗಾಗಬಾರದು, ಕಷ್ಟದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ, ಧರ್ಮದ ಹಾದಿಯಲ್ಲಿ ಸಾಗಬೇಕು. ಸತ್ಯಕ್ಕೆ ಯಾವಾಗಲೂ ಜಯವಿದ್ದು, ಹಿಂಗಾರು ರೈತನ ಕೈ ಹಿಡಿಯಲಿದೆ ಎಂದು ಭವಷ್ಯಿ ನುಡಿದರು.

ಮಾಜಿ ಶಾಸಕ ಸುಭಾಷ ಗುತ್ತೇದಾರ್​ ಮಾತನಾಡಿ, ನಮ್ಮ ಪೂರ್ವಜರು ನಿರಂತರ ಧರ್ಮ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮುಂದಿನ ಪೀಳಿಗೆಯೂ ಧರ್ಮದ ಹಾದಿಯಲ್ಲಿ ನಡೆಯಬೇಕು. ಆಗ ಮಾತ್ರ ಧರ್ಮ ನಮ್ಮನ್ನು ಕಾಪಾಡುತ್ತದೆ. ಶ್ರೀ ವೀರೇಶ್ವರ ದೇವಸ್ಥಾನದ ಗರ್ಭಗುಡಿ ನಿರ್ಮಾಣಕ್ಕೆ ತನು&ಮನ ದಿಂದ ಸೇವೆ ಸಲ್ಲಿಸುವುದಾಗಿ ಹೇಳಿದರು.

ಕಲಬುರಗಿ-ಬೀದರ್​ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟದ ಅಧ್ಯಕ್ಷ ಆರ್​.ಕೆ. ಪಾಟೀಲ್​ ಮಾತನಾಡಿ, ಶ್ರೀ ವೀರೇಶ್ವರ ಗರ್ಭಗುಡಿ ನಿರ್ಮಾಣ ಕಾರ್ಯಕ್ಕೆ ಜಗದ್ಗುರುಗಳು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ಮಹತ್ಕಾರ್ಯಕ್ಕೆ ಶಾಸಕ ಬಿ.ಆರ್​ ಪಾಟೀಲ್​ ಅವರಿಂದ 25 ಲಕ್ಷ ರೂ. ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ಅಧ್ಯತೆ, ಪಾಳಾದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯ, ಆಳಂದದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ, ನಿಂರ್ಬಗಾದ ಶ್ರೀ ಶಿವಲಿಂಗ ದೇವರು, ಶ್ರೀ ಸಿದ್ದಮ್ಮಮ್ಮ ತಾಯಿ ಸಾನ್ನಿಧ್ಯ ವಹಿಸಿದರು.

ಪ್ರಮುಖರಾದ ಶರಣಬಸಪ್ಪ ಭೂಸನೂರ, ಗುರುಶರಣಗೌಡ ಪಾಟೀಲ್​, ಚಂದ್ರಕಾಂತ ಭೂಸನೂರ, ಸೂರ್ಯಕಾಂತ ಶಾಸಿ, ಮೃತ್ಯುಂಜಯ ಎಸ್​., ಗುರುಶಾಂತಯ್ಯ ಸ್ಥಾವರಮಠ, ವೀರಭದ್ರ ಸ್ಥಾವರಮಠ, ಗುರುಲಿಂಗಯ್ಯ ಸ್ವಾಮಿ ಹಿತ್ತಲಶಿರೂರ, ಗುರಣ್ಣ ಪಾಲ್ದೆ ಇತರರಿದ್ದರು. ವೀರಣ್ಣ ಮಂಗಾಣೆ ಸ್ವಾಗತಿಸಿದರು. ಚಂದ್ರಶೇಖರ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಸಿದ್ದರಾಮ ಅಮೃತಕಾರಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net