

ಅಫಜಲಪುರ: ದೇವಲಗಾಣಗಾಪುರದ ನಿರ್ಗುಣ ಮಠದಲ್ಲಿ ಅನಂತ ಚತುರ್ದಶಿಯನ್ನು ಶುಕ್ರವಾರ ಶ್ರದ್ಧಾ- ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ದತ್ತಾತ್ರೇಯ ಮಹಾರಾಜರಿಗೆ ಕಾಕಡಾರತಿ ಮೂಲಕ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. ಬಳಿಕ ನಿರ್ಗುಣ ಪಾದುಕೆಗಳಿಗೆ ಅಷ್ಟಗಂಧ, ಕೇಸರ, ಕಸ್ತೂರಿ, ಸುಗಂಧ ದ್ರವ್ಯ ಲೇಪನ ಜರುಗಿತು. ಶ್ರೀ ದತ್ತಾತ್ರೇಯ ಮಹಾರಾಜರಿಗೆ ಅನಂತ ಪದ್ಮನಾಭ ಸ್ವಾಮಿ ರೂಪದಲ್ಲಿ ವಿವಿಧ ಫಲ-ಪುಷ್ಪಗಳಿಂದ ಅಲಂಕಾರ ಮಾಡಿ, ನೈವೇದ್ಯ ಸಮರ್ಪಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಅಸಂಖ್ಯ ಭಕ್ತರು ತ್ರಿಮೂರ್ತಿ ಸ್ವರೂಪಿ ಭಗವಂತನ ವಿಶೇಷ ದರ್ಶನ ಪಡೆದು ಕೃತಾರ್ಥರಾದರು. ರಾತ್ರಿ 8ಕ್ಕೆ ಭಕ್ತರ ಜೈೂಷದೊಂದಿಗೆ ಪಲ್ಲಕ್ಕಿ ಸೇವೆ ಜರುಗಿತು.
ನಿರ್ಗುಣ ಮಠದ ಮುಖ್ಯ ಅರ್ಚಕ ಪ್ರಖ್ಯಾತ ಪೂಜಾರಿ ಮಾತನಾಡಿ, ಭೀಕರ ಬರದಿಂದ ನಾಡನ್ನು ಪಾರುಮಾಡಿ, ಉತ್ತಮ ಮಳೆ- ಬೆಳೆಯಾಗಿ ಅನ್ನದಾತರ ಬದುಕು ಸಮೃದ್ಧವಾಗಬೇಕಿದೆ. ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ದತ್ತನ ಅನುಗ್ರಹ ದೊರೆಯಲಿ ಎಂಬ ಸಂಕಲ್ಪದೊಂದಿಗೆ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಪ್ರಮುಖರಾದ ನಾಗೇಶಭಟ್ಟ ಪೂಜಾರಿ, ದತ್ತಾತ್ರೇಯ ಪೂಜಾರಿ, ಮನೋಹರ ಪೂಜಾರಿ, ಚಂದ್ರವಿಲಾಸ ಪೂಜಾರಿ, ಕಲ್ಲಮಭಟ್ಟ ಪೂಜಾರಿ, ಪ್ರಿಯಾಂಕ್ ಪೂಜಾರಿ, ಉದಯ ಪೂಜಾರಿ, ಪ್ರಖ್ಯಾತ ಪೂಜಾರಿ, ಪ್ರಫುಲ್ ಪೂಜಾರಿ, ಪ್ರವಿಣ ಪೂಜಾರಿ, ಕರುಣಾಕರ ಪೂಜಾರಿ, ದಿಗಂಬರ ಪೂಜಾರಿ, ಪ್ರಸಾದ ಪೂಜಾರಿ, ಅವಧೂತ ಪೂಜಾರಿ, ನರಹರಿ ಪೂಜಾರಿ, ಗುಂಡುಭಟ್ಟ ಪೂಜಾರಿ, ಕೌಸ್ತುಭ ಪೂಜಾರಿ, ದೇವು ಪೂಜಾರಿ, ಭರತ ಪೂಜಾರಿ, ರೋಹಿತ ಪೂಜಾರಿ, ಕಿರಣ ಪೂಜಾರಿ, ಶ್ರೀಧರ ಪೂಜಾರಿ, ಅಭಯ ಪೂಜಾರಿ, ಚಂದನ ಪೂಜಾರಿ, ಶರತ ಪೂಜಾರಿ, ಆಶೀರ್ವಾದ ಪೂಜಾರಿ, ಅರ್ಲಕ ಪೂಜಾರಿ, ಸರ್ವೇಶ ಪೂಜಾರಿ, ಚೇತನ ಪೂಜಾರಿ, ಸ್ವರೂಪ ಪೂಜಾರಿ, ಇತರರಿದ್ದರು.