ತೆರೆದ ಕೊಳವೆಬಾವಿ ಮುಕ್ತ ಕರ್ನಾಟಕದ ಗುರಿ

ಕೊಳವೆಬಾವಿ ಸುರಕ್ಷತಾ ಅಭಿಯಾನಕ್ಕೆ ಸಂಬಂಧಿಸಿದಂಗತೆ ಸಣ್ಣ ನೀರಾವರಿ ಸಚಿವ ಡಾ.ಅಜಯಸಿಂಗ್​ ಅವರು ಬೆಂಗಳೂರಿನಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದರು. ಇಲಾಖೆಯ ಕಾರ್ಯದರ್ಶಿ ರಾಜೇಶ ಅಮೀನ್​ಬಾವಿ ಇತರರಿದ್ದರು.
ಕೊಳವೆಬಾವಿ ಸುರಕ್ಷತಾ ಅಭಿಯಾನಕ್ಕೆ ಸಂಬಂಧಿಸಿದಂಗತೆ ಸಣ್ಣ ನೀರಾವರಿ ಸಚಿವ ಡಾ.ಅಜಯಸಿಂಗ್​ ಅವರು ಬೆಂಗಳೂರಿನಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದರು. ಇಲಾಖೆಯ ಕಾರ್ಯದರ್ಶಿ ರಾಜೇಶ ಅಮೀನ್​ಬಾವಿ ಇತರರಿದ್ದರು.
Published on: 

ಕಲಬುರಗಿ: ವಿಫಲ ಹಾಗೂ ನಿರುಪಯುಕ್ತ ತೆರೆದ ಕೊಳವೆ ಬಾವಿಗಳಿಂದ ಮಕ್ಕಳು ಅಪಘಾತಕ್ಕೀಡಾಗುವ ಹಾಗೂ ಜಾನುವಾರುಗಳಿಗೆ ಅಪಾಯ ಉಂಟಾಗುವ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ರಾಜ್ಯಾದ್ಯಂತ ಕೊಳವೆಬಾವಿ ಸುರಕ್ಷಿತಾ ಅಭಿಯಾನ ಆರಂಭಿಸಲು ಮುಂದಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್​ ಧರ್ಮಸಿಂಗ್​ ತಿಳಿಸಿದ್ದಾರೆ.

ಅಭಿಯಾನದ ರೂಪುರೇಷೆ, ಅನುಷ್ಠಾನ ವಿಧಾನ, ಇಲಾಖಾವಾರು ಮಾಹಿತಿ ಸಂಗ್ರಹ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸುವಂತೆ ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯಕ್ಕೆ ಸೂಚನೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಅವರು, ನೀರು ಲಭ್ಯವಾಗದ ಮತ್ತು ಬಳಕೆಗೆ ಯೋಗ್ಯವಾಗದ ಕೊಳವೆಬಾವಿಗಳನ್ನು ಸುರತವಾಗಿ ಮುಚ್ಚುವುದು ಕಡ್ಡಾಯ. ಸುಪ್ರೀಂಕೋರ್ಟ್​ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈ ಕುರಿತು ಅಗತ್ಯ ಸುರಕ್ಷಿತಾ ಕ್ರಮ ಹಾಗೂ ಮೇಲ್ವಿಚಾರಣಾ ವ್ಯವಸ್ಥೆಗೆ ಕಾನೂನುಬದ್ಧ ಅವಕಾಶ ಕಲ್ಪಿಸಲಾಗಿದೆ. ಆದರೂ ದಾಖಲೆಗಳಿಗೆ ಬಾರದ ಅಥವಾ ಸಮರ್ಪಕವಾಗಿ ಮುಚ್ಚದಿರುವ ಕೊಳವೆಬಾವಿಗಳು ಇರುವ ಸಾಧ್ಯತೆ ಸಂಪೂರ್ಣವಾಗಿ ತಳ್ಳಿ ಹಾಕುವಂತಿಲ್ಲ ಹೇಳಿದ್ದಾರೆ.

ಒಂದು ತೆರೆದ ಕೊಳವೆಬಾವಿಯೂ ಮಗುವಿನ ಜೀವಕ್ಕೆ ಅಪಾಯವಾಗಬಾರದು. ಮೊದಲ ಹಂತದಲ್ಲಿ ಸಣ್ಣ ನೀರಾವರಿ ಇಲಾಖೆ ಕೊರೆಸಿರುವ ಎಲ್ಲ ವಿಫಲ ಮತ್ತು ನಿರುಪಯುಕ್ತ ಕೊಳವೆಬಾವಿಗಳನ್ನು ಗುರುತಿಸಿ, ಅವು ಸುರತವಾಗಿ ಮುಚ್ಚಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಅಗತ್ಯವಿರುವ ಕಡೆ ತಣ ಮುಚ್ಚುವ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಅಜಯಸಿಂಗ್​ ತಿಳಿಸಿದ್ದಾರೆ.

ಮುಂದಿನ ಹಂತದಲ್ಲಿ ಇತರೆ ಸರ್ಕಾರಿ ಇಲಾಖೆಗಳು, ಸ್ಥಳಿಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿರುವ ವಿಫಲ ಅಥವಾ ತೆರೆದ ಕೊಳವೆಬಾವಿಗಳ ಮಾಹಿತಿ ಸಂಗ್ರಹಿಸಿ, ಸಂಬಂಧಿಸಿದ ಇಲಾಖೆಗಳ ಸಮನ್ವಯದಲ್ಲಿ ಸುರತ ಮುಚ್ಚುವಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಸಾರ್ವಜನಿಕರಿಂದ ಅಪಾಯಕಾರಿ ತೆರೆದ ಕೊಳವೆಬಾವಿಗಳ ಮಾಹಿತಿ ಪಡೆಯಲು ವಾಟ್ಸಾಪ್​, ವೆಬ್​ ಆಧಾರಿತ ವರದಿ ವ್ಯವಸ್ಥೆ, ಸ್ಥಳದ ಜಿಯೋ&ಟ್ಯಾಗ್ಡ್​ ಚಿತ್ರಗಳು ಹಾಗೂ ದೂರುದಿಂದ ಮುಚ್ಚುವಿಕೆಯವರೆಗೆ ಟ್ರಾ$್ಯಕಿಂಗ್​ ವ್ಯವಸ್ಥೆ ರೂಪಿಸುವ ಸಾಧ್ಯತೆ ಪರಿಶೀಲಿಸಿ ಕಾರ್ಯಯೋಜನೆಯಲ್ಲಿ ಸೇರಿಸುವಂತೆ ಸಚಿವರು ಸೂಚಿಸಿದ್ದಾರೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಜೇಶ ಅಮೀನ್​ಬಾವಿ, ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯದ ಅಧಿಕಾರಿಗಳು ಇದ್ದರು.

ನಮ್ಮ ಗುರಿ ಕೇವಲ ಇಲಾಖೆಯ ದಾಖಲೆಗಳಲ್ಲಿರುವ ಕೊಳವೆಬಾವಿ ಮುಚ್ಚುವುದಲ್ಲ. ಸರ್ಕಾರದ ಗಮನಕ್ಕೆ ಬಾರದ ಅಪಾಯಕಾರಿ ತೆರೆದ ಕೊಳವೆಬಾವಿಗಳನ್ನೂ ಗುರುತಿಸಿ ಸುರಕ್ಷಿತಗೊಳಿಸಬೇಕು. ರಾಜ್ಯವನ್ನು ತೆರೆದ ಕೊಳವೆಬಾವಿ ಮುಕ್ತ ಕರ್ನಾಟಕವನ್ನಾಗಿಸುವುದು ನಮ್ಮ ಸರ್ಕಾರದ ಧೃಢ ಸಂಕಲ್ಪ.
ಡಾ.ಅಜಯ ಧರ್ಮಸಿಂಗ್​, ಸಣ್ಣ ನೀರಾವರಿ ಸಚಿವ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net