

ಆಳಂದ: ಗಣಪತಿ ಉತ್ಸವ ಕೇವಲ ಧಾರ್ಮಿಕ ಆಚರಣೆಯಾಗದೆ, ದೇಶದ ಜನರನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ಶ್ರೀ ರಾಮ ಮಾರ್ಕೇಟ್ನಲ್ಲಿ ಹಿಂದೂ ಮಹಾಗಣಪತಿ ಸಮಿತಿಯ 11ನೇ ವರ್ಷದ ಭವ್ಯ ಶೋಭಾಯಾತ್ರೆಗೆ ಭಾನುವಾರ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡುವ ಮೂಲಕ ಜನರಲ್ಲಿ ರಾಷ್ಟ್ರೀಯ ಪ್ರೆ ಹಾಗೂ ದೇಶಭಕ್ತಿ ಭಾವನೆ ಮೂಡಿಸಿದರು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್ ಮಾತನಾಡಿ, ಗಣೇಶ ಉತ್ಸವವೂ ಸರ್ವಧರ್ಮದವರನ್ನು ಒಗ್ಗೂಡಿಸುವುದರ ಜತೆಗೆ ಎಲ್ಲರಲ್ಲೂ ಸಹೋದರತೆ ಭಾವನೆ ಮೂಡಿಸುತ್ತದೆ ಎಂದು ಹೇಳಿದರು.
ಹಿಂದೂ ಮಹಾ ಗಣಪತಿ ಅಧ್ಯಕ್ಷ ಮಹೇಶ ಗೌಳಿ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಬಾಬಾ ಸಾಹೇಬ್ ಪಾಟೀಲ್, ಆನಂದ ಪಾಟೀಲ್ ಕೊರಳಿ, ಸಂತೋಷ ಹಾದಿಮನಿ, ಸುಜ್ಞಾನಿ ಪೊದ್ದಾರ, ನಾಗನಾಥ ಏಟೆ, ಗಣೇಶ ಭೋಸಲೆ, ಶರಣು ಕುಂಬಾರ ಇತರರಿದ್ದರು.
ಆಳಂದನಲ್ಲಿ ಹಿಂದೂ ಮಹಾಗಣಪತಿಯ ವಿಸರ್ಜನೆ ನಿಮಿತ್ತ ಭಾನುವಾರ ಅದ್ದೂರಿ ಮೆರವಣಿಗೆ ನಡೆಯಿತು. ಶ್ರೀರಾಮ ಮಾರ್ಕೆಟ್ನಿಂದ ಶುರುವಾದ ಶೋಭಾಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಯುವಕರಿಂದ ದೇಶಭಕ್ತಿ ೂಷಣೆಗಳು ಮೊಳಗಿದವು. ಲೆಜಿಮ್ ಹಾಗೂ ಭರತನಾಟ್ಯ ಪ್ರದರ್ಶಿಸಿ ಗಮನಸೆಳೆದರು. ಯಾವುದೇ ಅಹಿತಕರ ಟನೆ ನಡೆಯದಂತೆ ಸಿಪಿಐ ಜಗದೀಶ ಕೆ.ಜಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. 2 ಡಿವೈಎಸ್ಪಿ, 5 ಪಿಐ, ಸಿಪಿಐ, ಆರ್ಪಿಐ, 7 ಪಿಎಸ್ಐ, 83 ಎಚ್ಸಿಪಿಸಿ, 30 ಗೃಹರಕ್ಷಕ ದಳವನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.