ಕಲಬುರಗಿ: ಶಿಕ್ಷಣ ರಂಗದಲ್ಲಿ ಲಿಂಗಾಯತ ಮಠ-ಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಪತ್ರಕರ್ತ, ಬಸವತತ್ವ ಚಿಂತಕ ಶರಣ ಡಾ.ರಂಜಾನ್ ದರ್ಗಾ ಹೇಳಿದರು.
ಜಯನಗರ ಅನುಭವ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಇವನಮ್ಮವ ಬಸವ ಸಂಸತಿ ಉತ್ಸವ, ದೇವದಾಸಿ ವಿದ್ಯಾರ್ಥಿನಿಯರ ಶಿಕ್ಷಣದ ದತ್ತು ಸ್ವೀಕಾರ, ದೇವದಾಸಿ ಮಕ್ಕಳ ಕಲ್ಯಾಣ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿರಕ್ತ ಮಠದ ಶಿಕ್ಷಣ ಸಂಸ್ಥೆಗಳು, ಶರಣರ ಮಠಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.
ವಿಶ್ವದಲ್ಲಿ ಬಸವತತ್ವ ಚಿಂತನೆ ಅಡಗಿದ್ದು, ಸಂಶೋಧನೆಗಳು ನಡೆದಿವೆ. ಬೌದ್ಧ, ಜೈನ ಸೇರಿ ಆರು ಧರ್ಮಗಳಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ರಕ್ತ ಹರಿಸಿ ಕ್ರಾಂತಿಕಾರಿ ನಿಲುವು ತಾಳಿದ್ದಾರೆ. ಆದರೂ ಅಸ್ಪಶ್ಯತೆ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ಉದ್ಘಾಟಿಸಿ ಮಾತನಾಡಿದರು. ಹೈಕೋರ್ಟ್ ನ್ಯಾಯವಾದಿ ಶಿವರುದ್ರಪ್ಪ ಎನ್.ಬಿ ಮಾತನಾಡಿ, ಶಾಲಾ ದಾಖಲಾತಿಯಲ್ಲೇ ಧರ್ಮ ಸೂಚಿಸಿಕೊಳ್ಳಬೇಕು. ಶ್ರಮಿಕ ವರ್ಗಕ್ಕೆ ನತೆ ತಂದುಕೊಟ್ಟಿದ್ದು ಲಿಂಗಾಯತ ಧರ್ಮ ಎಂದರು.
ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ.ಶ್ರೀಶೈಲ್ ಮಸೂತೆ ಪ್ರಾಸ್ತಾವಿಕ ಮಾತನಾಡಿ, ಭಾರತೀಯ ಸಂಸ್ಕೃತಿ ಹಾಳು ಮಾಡುವ ಕಾಲಟ್ಟದಲ್ಲಿದ್ದೇವೆ. ಮನುಷ್ಯತ್ವದ ಬರವೂ ಕಾಡುತ್ತಿದೆ. ಇದನ್ನು ತೊಲಗಿಸಲು ಇವನಮ್ಮವ ಸಂಸತಿಗೆ ಒಳಗಾಗಬೇಕಾಗಿದೆ ಎಂದು ತಿಳಿಸಿದರು.
ಇಳಕಲ್ನ ಶ್ರೀ ಗುರುಮಹಾಂತ ಸ್ವಾಮೀಜಿ, ಬಸಕಲ್ಯಾಣದ ಡಾ.ಸಿದ್ದರಾಮ ಶರಣರು ಬೆಲ್ದಾಳ, ಬೆಂಗಳೂರಿನ ಜಗದ್ಗುರು ಶ್ರೀ ಚನ್ನಬಸವಾನಂದ ಸ್ವಾಮೀಜಿ, ಚಿಗರಳ್ಳಿ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಬೀದರ್ನ ಸದ್ಗುರು ಮಾತೆ ಸತ್ಯದೇವಿ, ಅಕ್ಕಲಕೋಟ ಸದ್ಗುರು ಮಹಾನಂದಾ ತಾಯಿ, ಕಲಬುರಗಿಯ ಪ್ರಭುಶ್ರೀ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಆರ್.ಕೆ. ಹುಡಗಿ, ಎಸ್.ದಿವಾಕರ್, ಎಚ್.ವಿಜಯಲಕ್ಷಿ$್ಮ ಆದಿ, ಶಿವಪುತ್ರಪ್ಪ ಭಾವಿ, ಶ್ರವಣಕುಮಾರ ಮುನೋಳಿ, ಸೂರ್ಯಕಾಂತ ಸೊನ್ನದ, ಸಿದ್ರಾಮಪ್ಪ ಧೂಳಂಗೆ, ಅಲ್ಲಮಪ್ರಭು ನಾವದಗಿ. ಸಂಗಮನಾಥ ರೇವತಗಾಂವ, ಬಾಬುರಾವ ಯಡ್ರಾಮಿ ಇತರರಿದ್ದರು. ನಾಗೇಂದ್ರಪ್ಪ ನಿಂಬರ್ಗಿ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ಸದ್ಗುರು ಶ್ರೀ ಬಸವಪ್ರಭು ಮಹಾಸ್ವಾಮೀಜಿ ಅವರಿಗೆ ಧರ್ಮಕ್ರಾಂತಿ ಧೀರಯೋಗಿ ಪ್ರವಚನ ಪಿತಾಮಹ ಲಿಂಗಾನಂದ ಶ್ರೀ ಪ್ರಶಸ್ತಿ, ಪದ್ಮಶ್ರೀ ಪುರಸತೆ ಡಾ.ಸೀತವ್ವ ದುಂಡಪ್ಪ ಜೋಡಟ್ಟಿ ಅವರಿಗೆ ವಿಶ್ವದ ಪ್ರಪ್ರಥಮ ಜಗದ್ಗುರು ಮಾತೆ ಮಹಾದೇವಿ ಚಿನ್ಮೂಲಾದ್ರಿ ಚಿತ್ಕಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೇವದಾಸಿ ಯುವಕ&ಯುವತಿಯರ ಸರಳ ವಚನ ಮಾಂಗಲ್ಯ ಕಲ್ಯಾಣ ಮಹೋತ್ಸವ, ದೇವದಾಸಿ ಮಕ್ಕಳಿಗೆ ಶಿಕ್ಷಣದ ದತ್ತು ಸ್ವೀಕಾರ ಲೋಕಾರ್ಪಣೆ ನಡೆಯಿತು.