ರೈತನ ಕಣ್ಣೀರು ಒರೆಸುವಲ್ಲಿ ಕಾಂಗ್ರೆಸ್​ ಸರ್ಕಾರ ವಿಫಲ

 ರೈತರ ಕಷ್ಟಕ್ಕೆ ಸ್ಪಂದಿಸುವಲ್ಲಿ ಕಾಂಗ್ರೆಸ್​ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸೇಡಂ ತಾಲೂಕು ಆಡಳಿತ ಸೌಧ ಎದುರು ಭಾರತೀಯ ಜನತಾ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ರಾಜಕುಮಾರ ಪಾಟೀಲ್​, ಬಿಜೆಪಿ ಜಿಲ್ಲಾ ಉಪಾಧ್ಯೆ ಸಂತೋಷಿರಾಣಿ ಪಾಟೀಲ್​, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್​, ಓಂಪ್ರಕಾಶ ಪಾಟೀಲ್​ ಇತರರಿದ್ದರು.
ರೈತರ ಕಷ್ಟಕ್ಕೆ ಸ್ಪಂದಿಸುವಲ್ಲಿ ಕಾಂಗ್ರೆಸ್​ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸೇಡಂ ತಾಲೂಕು ಆಡಳಿತ ಸೌಧ ಎದುರು ಭಾರತೀಯ ಜನತಾ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ರಾಜಕುಮಾರ ಪಾಟೀಲ್​, ಬಿಜೆಪಿ ಜಿಲ್ಲಾ ಉಪಾಧ್ಯೆ ಸಂತೋಷಿರಾಣಿ ಪಾಟೀಲ್​, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್​, ಓಂಪ್ರಕಾಶ ಪಾಟೀಲ್​ ಇತರರಿದ್ದರು.
Published on: 

ಸೇಡಂ: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೃಷಿಕರು ಸಂಕಷ್ಟದಲ್ಲಿದ್ದು, ಅವರ ಕಷ್ಟ ಕೇಳಿ ಸ್ಪಂದಿಸುವ ಮೂಲಕ ಕಣ್ಣೀರು ಒರೆಸಬೇಕಿದ್ದ ರಾಜ್ಯ ಸರ್ಕಾರ ತನಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ. ಕಾಂಗ್ರೆಸ್​ ಪಕ್ಷಕ್ಕೆ ರೈತ ಬಗ್ಗೆ ಕಾಳಜಿಯಿಲ್ಲ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಕಿಡಿಕಾರಿದರು.

ಕಾಂಗ್ರೆಸ್​ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕೊತ್ತಲ ಬಸವೇಶ್ವರ ದೇವಾಲಯದಿಂದ ತಹಸಿಲ್​ ಕಚೇರಿವರೆಗೆ ಸೋಮವಾರ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಮಾತನಾಡಿದ ಅವರು, ನಮ್ಮಲ್ಲಿ ಮಳೆಯಾಶ್ರಿತ ಕೃಷಿ ಪದ್ಧತಿಯಿದ್ದು, ಮುಂಗಾರು ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿದ ಬೆಳೆ ಒಣಗಿವೆ. ಜಾನುವಾರುಗಳಿಗೆ ಮೇವು ಮತ್ತು ಕುಡಿವ ನೀರಿನ ಸಮಸ್ಯೆಯೂ ಎದುರಾಗಿದೆ. ಬೆಳೆ ನಷ್ಟದಿಂದ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಬರಪೀಡಿತ ರೈತರಿಗೆ ಘೋಷಿತ ಪರಿಹಾರವನ್ನು ವಿಳಂಬವಿಲ್ಲದೆ ನೇರವಾಗಿ ಖಾತೆಗೆ ಜಮೆ ಮಾಡಬೇಕು. ಬೆಳೆ ವಿಮೆ ಕಂತು ಪಾವತಿಸಿದ ಎಲ್ಲ ರೈತರಿಗೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು. ಪ್ರತಿ ಹಳ್ಳಿಗೂ ಸಮರ್ಪಕ ಕುಡಿವ ನೀರು ಪೂರೈಸಲು ಟ್ಯಾಂಕರ್​ ಹಾಗೂ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕೃಷಿ ಪಂಪ್​ಸೆಟ್​ಗಳು ಮತ್ತು ಬೋರ್​ವೆಲ್​ಗಳಿಗೆ ನಿರಂತರ ವಿದ್ಯುತ್​ ಪೂರೈಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸಂತೋಷಿರಾಣಿ ಪಾಟೀಲ್​ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಿ, ಬಡವರ ಬದುಕಿಗೆ ನೆರವಾಗಬೇಕು. ರೈತರ ಸಾಲಮನ್ನಾ ಮಾಡುವುದರ ಜತೆಗೆ ಬಡ್ಡಿಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಓಂಪ್ರಕಾಶ ಪಾಟೀಲ್​, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್​, ಪ್ರಧಾನ ಕಾರ್ಯದರ್ಶಿಗಳಾದ ತಿರುಪತಿ ಶಹಾಬಾದಕರ್​, ರಾವೇಂದ್ರ ಮೆಕಾನಿಕ್​, ನಗರ ಅಧ್ಯಕ್ಷ ಸತೀಶ ಪಾಟೀಲ್​ ತರನಳ್ಳಿ, ಪ್ರಮುಖರಾದ ಶಿವಲಿಂಗರೆಡ್ಡಿ ಪಾಟೀಲ್​ ಬೆನಕನಹಳ್ಳಿ, ಮಹೇಶ ಯಳಮನಿ, ವಿಜಯಕುಮಾರ ಆಡಕಿ, ಸಿದ್ದು ಬಾನರ್​, ವೆಂಕಟೇಶ ಪಾಟೀಲ್​, ವೀರೇಶ ಹೂಗಾರ, ನಾಗರೆಡ್ಡಿ ಮುಧೋಳ, ಅತೀಶ ಪವಾರ್​, ಚನ್ನಮ್ಮ ಪಾಟೀಲ್​, ಶಿವಾನಂದಸ್ವಾಮಿ, ರಾಮುನಾಯಕ್​ ರಾಠೋಡ್​, ಅಶೋಕ ಪವಾರ್​, ಶ್ರೀಕಾಂತರೆಡ್ಡಿ ಮುಧೋಳ, ರಾಮು ಕಣೇಕಲ್​, ಮಹಾದೇವಪ್ಪ ಗೋಣಿ, ರವಿ ಕಡತಾಲ, ಸೂಗಪ್ಪ ರಂಜೋಳ, ಮಲ್ಲಿಕಾರ್ಜುನ ಬಿಬ್ಬಳ್ಳಿ, ಸಿದ್ದು ಊಡಗಿ, ಮಹಾವೀರ ಅಳ್ಳೋಳ್ಳಿ, ವಿಷ್ಣು ಊಡಗಿ, ಸಿದ್ದಯ್ಯಸ್ವಾಮಿ ನಾಡೇಪಲ್ಲಿ, ಲ್ಮಕಾಂತ ಹೊನ್ನಕೇರಿ, ಶ್ರೀಮಂತ ಅವಂಟಿ, ನಂದು ಸಾಹುಕಾರ, ನಾಗು ಸಾಹುಕಾರ ಕೋಡ್ಲಾ, ರಾಜು ಮದರಿ, ಸಂತೋಷ ರಂಜೋಳ, ಅನಿಲ ರನ್ನೇಟ್ಲಾ, ಅನಂತಯ್ಯ ಕಡಚೆರ್ಲಾ, ಕಾಶಿನಾಥ ಕುಲಕರ್ಣಿ ಇತರರಿದ್ದರು.