

ಕಲಬುರಗಿ: ಲಷ್ಕರ್-ಇ-ತಯ್ಯಬಾ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಒಬ್ಬನನ್ನು ಶಂಕಿತನಾಗಿ ವಶಕ್ಕೆ ಪಡೆಯಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ವಿಚಾರ ಖಚಿತವಾಗಿದೆ. ಇಬ್ಬರ ಪೈಕಿ ಒಬ್ಬನ ಸಂಪರ್ಕದ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಬೇರೆ ರಾಜ್ಯದಿಂದ ಕಲಬುರಗಿಗೆ ಆಗಮಿಸಿರುವ ಯುವಕರಾಗಿದ್ದು, ಅವರ ಚಟುವಟಿಕೆಗಳ ಕುರಿತು ತನಿಖೆ ಪ್ರಗತಿಯಲ್ಲಿದೆ. ಕೇಂದ್ರ ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಮಾಹಿತಿ ಕಲೆಹಾಕುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳು ತಿಳಿದುಬರಲಿವೆ ಎಂದರು.
ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಗಳ ಕುರಿತು ಗುಪ್ತಚರ ಇಲಾಖೆ ಹಾಗೂ ಪೊಲೀಸರು ನಿಗಾ ವಹಿಸಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಉಗ್ರರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಫಾಲೋ, ಬೆಂಬಲ, ಲೈಕ್ ಮಾಡಿದ್ದು ವೀಕ್ಷಿಸಿ, ತನಿಖೆ. ಬ್ಲಾಕ್ ಲಿಸ್ಟ್ ಅಕೌಂಟ್ ಗಳನ್ನು ಪರಿಶೀಲನೆ. ರಾಜ್ಯ ಕೇಂದ್ರ ಸರ್ಕಾರ ಜಂಟಿಯಾಗಿ ಮಾಡಬೇಕೇ ವಿನಾಃ, ರಾಜಕೀಯ ಮಾಡಲು ಆಗಲ್ಲ ಎಂದು ಹೇಳಿದರು.
ಸ್ಥಳೀಯರು, ಕನ್ನಡಿಗರು ಇದ್ದರೆ ಹೆದರಬೇಕಿತ್ತು. ಬರುವವರಿಗೆ ತಡೆಯಲು ಆಗುವುದಿಲ್ಲ. ಬಾಂಗ್ಲಾ ವಲಸಿಗರು ಬರುತ್ತಾರೆ. ನಮಗೆ ಗಡಿ ಹತ್ತಿಲ್ಲ ಎಂದು ಹೇಳಿದರು.