

ಚಿತ್ತಾಪುರ: ವನ್ಯಜಿವಿ ಸಪ್ತಾಹ ಅಂಗವಾಗಿ ಪ್ರಾದೇಶಿಕ ಅರಣ್ಯ ವಲಯದಿಂದ ಅರಣ್ಯ ಅಂಚಿನ ಅಲ್ಲೂರ್(ಬಿ), ಭೀಮನಹಳ್ಳಿ ಹಾಗೂ ರಾಮತೀರ್ಥ ಗ್ರಾಮಗಳಲ್ಲಿ ಗುರುವಾರ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ವನ್ಯಜಿವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು. ಆವಾಸಸ್ಥಾನಗಳ ಸಂಪರ್ಕ, ವನ್ಯಜಿವಿಗಳ ಸಮೃದ್ಧಿ ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣೆ, ವನ್ಯಜಿವಿಗಳ ರಣೆ ಹಾಗೂ ಅರಣ್ಯ ಬೆಂಕಿ ತಡೆಗಟ್ಟುವಿಕೆಯ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು. ಅರಣ್ಯ ಪ್ರದೇಶಗಳ ಸಂರಕ್ಷಣೆ, ವನ್ಯಜಿವಿಗಳ ಆವಾಸಸ್ಥಾನಗಳನ್ನು ಕಾಪಾಡುವುದು ಹಾಗೂ ಬೇಸಿಗೆ ಸೇರಿ ವಿವಿಧ ಸಂದರ್ಭಗಳಲ್ಲಿ ಸಂಭವಿಸುವ ಅರಣ್ಯ ಬೆಂಕಿಯನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂಬ ಸಂದೇಶ ಬೀದಿ ನಾಟಕಗಳ ಮೂಲಕ ನೀಡಲಾಯಿತು. ಡಿಆರ್ಎಫ್ಒ ನಟರಾಜ, ಬೀಟ್ ಫಾರೆಸ್ಟರ್ ಸಿದ್ದಾರೂಢ, ಸಿಬ್ಬಂದಿ ದೇವಪ್ಪ, ಖೀರು ಇತರರಿದ್ದರು.