ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿ

ಅಫಜಲಪುರದಲ್ಲಿ ಫಲಾನುಭವಿಗಳಿಗೆ ಟ್ರಾಕ್ಟರ್​ ಮತ್ತು ಭೂ ಅಭಿವೃದ್ಧಿ ಸಾಲದ ಪತ್ರವನ್ನು ಶಾಸಕ ಎಂ.ವೈ.ಪಾಟೀಲ್​ ವಿತರಣೆ ಮಾಡಿದರು. ಪ್ರಭುಗೌಡ ಪಾಟೀಲ್​, ಚಂದ್ರಶೇಖರ ಕರಜಗಿ, ಶಿವಾನಂದ ಗಾಡಿಸಾಹುಕಾರ ಇತರರಿದ್ದರು.
ಅಫಜಲಪುರದಲ್ಲಿ ಫಲಾನುಭವಿಗಳಿಗೆ ಟ್ರಾಕ್ಟರ್​ ಮತ್ತು ಭೂ ಅಭಿವೃದ್ಧಿ ಸಾಲದ ಪತ್ರವನ್ನು ಶಾಸಕ ಎಂ.ವೈ.ಪಾಟೀಲ್​ ವಿತರಣೆ ಮಾಡಿದರು. ಪ್ರಭುಗೌಡ ಪಾಟೀಲ್​, ಚಂದ್ರಶೇಖರ ಕರಜಗಿ, ಶಿವಾನಂದ ಗಾಡಿಸಾಹುಕಾರ ಇತರರಿದ್ದರು.
Published on: 

ಅಫಜಲಪುರ: ಸಹಕಾರ ಕ್ಷೇತ್ರದಲ್ಲಿ ನಾನು, ನಮಗಾಗಿ ಎಂಬ ತತ್ವವಿದೆ. ಸಾಲ ಪಡೆದ ಪ್ರತಿಯೊಬ್ಬರೂ ನಿಗದಿತ ಅವಧಿಯಲ್ಲಿ ಮರುಪಾವತಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲ್​ ಹೇಳಿದರು.

ಪಿಎಲ್​ಡಿ ಬ್ಯಾಂಕ್​ ಆವರಣದಲ್ಲಿ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಟ್ರಾಕ್ಟರ್​ ಮತ್ತು ಭೂ ಅಭಿವೃದ್ಧಿ ಸಾಲದ ಪತ್ರ ವಿತರಿಸಿ ಮಾತನಾಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ನಮ್ಮ ಬ್ಯಾಂಕ್​ಗಳು ಹಿಂದುಳಿದಿವೆ. ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಬೇಕು. ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಸಹಕಾರ ಕ್ಷೇತ್ರಗಳ ಬೆಳವಣಿಗೆಯಿಂದ ರೈತರ ಪ್ರಗತಿಯಾಗಲಿದ್ದು, ಮಾಲೀಕರಾಗದೆ, ಗ್ರಾಹಕರಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.

ಸಹಕಾರಿ ಕ್ಷೇತ್ರದಲ್ಲಿ ಕೆಲವೊಂದು ಬಾರಿ ಸರ್ಕಾರಗಳು ಸಾಲಮನ್ನಾ ಮಾಡಿ, ಮತ್ತೊಮ್ಮೆ ಕೊಟ್ಟಿವೆ. ಪಿಎಲ್​ಡಿ ರೈತರ ಬ್ಯಾಂಕ್​ ಆಗಿದ್ದು, ಹೊಸ ಸದಸ್ಯರು, ಶೇರ್​ ಹಣ ಮತ್ತು ಎಫ್​ಡಿ ಹೆಚ್ಚಿಸಬೇಕು. ಇದರಿಂದಾಗಿ ಪೈಪ್​ಲೈನ್​ ಸಾಲ, ಕ್ರಿಮಿನಾಶಕ ಮತ್ತು ರಸಗೊಬ್ಬರ ವಿತರಿಸಬಹುದು. ರೈತರ ವಿಶ್ವಾಸಗಳಿಸಿ ಮುನ್ನಡೆದರೆ ರಾಷ್ಟ್ರೀಕೃತ ಬ್ಯಾಂಕ್​ಗಳಿಗಿಂತ ಹೆಚ್ಚಿನ ಸಾಧನೆ ಮಾಡಬಹುದಾಗಿದೆ ಎಂದರು.

ಪಿಎಲ್​ಡಿ ಬ್ಯಾಂಕ್​ ಅಧ್ಯ ಪ್ರಭುಗೌಡ ಪಾಟೀಲ್​ ಮಾತನಾಡಿ, ಪ್ರಸಕ್ತ ವರ್ಷ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ 65 ಜನರಿಗೆ ಸಾಲ ಹಾಗೂ 2 ಟ್ರಾಕ್ಟರ್​ಗಳನ್ನು ವಿತರಿಸಲಾಗಿದೆ. ನಾವು ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು. ಸುಮಾರು ಶೇ.96 ಸಾಲ ವಸೂಲಾತಿ ಮಾಡಲಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ, ಅಫಜಲಪುರ-ದೇವಲ ಗಾಣಗಾಪುರ ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ತಾಪಂ ಮಾಜಿ ಅಧ್ಯಕ್ಷ ಶಿವಾನಂದ ಗಾಡಿಸಾಹುಕಾರ, ಪ್ರಮುಖರಾದ ಸಿದ್ದು ಶಿರಸಗಿ, ಸಾಹೇಬಗೌಡ ಪಾಟೀಲ್​, ಮಲ್ಲಿಕಾರ್ಜುನ ಖರ್ಗೆ, ಶರಣು ಈಶ್ವರಗೊಂಡ, ಅಜಯ ಪಾಟೀಲ್​, ಅಸ್ಪಾಕ್​ ಬಂದರವಾಡ, ಲ್ಮಪುತ್ರ ಕಲಶೆಟ್ಟಿ ಇತರರಿದ್ದರು.