ಗುರುಗಳನ್ನು ನೆನೆದು ಗೌರವಿಸುವುದು ಹೆಮ್ಮೆಯ ವಿಷಯ

 ಶಹಾಬಾದ್​ನ ಎಂಸಿಸಿ ಶಾಲೆಯ 1989ರ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನೆ ಸಮಾರಂಭವನ್ನು ಶಾಲೆ ಮಾಜಿ, ಹಾಲಿ ಶಿಕ್ಷಕರು ಉದ್ಘಾಟಿಸಿದರು. ಸಿಸ್ಟರ್​ ಸೀರಿನ್​, ಸಿಸ್ಟರ್​ ಲೋವಿಟಾ, ನಾಗೇಂದ್ರ ಬೇಲೂರ, ಭಾಸ್ಕರ, ಮಹ್ಮದ್​ ಖದೀರ್​ ಇದ್ದರು.

Published on: 

ಶಹಾಬಾದ್​: ಸುಮಾರು ನಾಲ್ಕು ದಶಕಗಳ ಹಿಂದೆ ಶಾಲೆಯಲ್ಲಿ ಶಿಕ್ಷಣ ಪಡೆದು, ದೇಶ-ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ತಮಗೆ ಶಿಕ್ಷಣ ನೀಡಿದ ಗುರುಗಳನ್ನು ಹುಡುಕಿಕೊಂಡು ಬಂದಿರುವುದು ಶಿಕ್ಷಕನಿಗೆ ಹೆಮ್ಮೆಯ ವಿಷಯ ಎಂದು ನಿವೃತ್ತ ಪ್ರಾಚಾರ್ಯ ನಾಗೇಂದ್ರ ಬೇಲೂರ ಹೇಳಿದರು. ಜಿಇ ಕಾಲನಿಯಲ್ಲಿರುವ ಎಂಸಿಸಿ ಶಾಲೆಯಲ್ಲಿ 1989ರ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಹುದ್ದೆ ಹಾಗೂ ಸ್ಥಾನದಲ್ಲಿದ್ದಾಗ ತಮ್ಮ ಶಿಕ್ಷಣದ ಮುಖ್ಯ ತಳಹದಿಯಾದ ಪ್ರಾಥಮಿಕ, ಪ್ರೌಢ ಶಿಕ್ಷಣದ ಶಿಕ್ಷಕರನ್ನು ನೆನೆಸುವುದು ವಿರಳ. ಆದರೆ 1989ರ ಸಾಲಿನ ವಿದ್ಯಾರ್ಥಿಗಳು 37 ವರ್ಷದ ನಂತರ ಪ್ರತಿ ಶಿಕ್ಷಕರನ್ನು ನೆನೆದು, ಎಲ್ಲರನ್ನು ಸೇರಿಸಿ ಗೌರವಿಸಿರುವುದು ಖುಷಿ ತಂದಿದೆ ಎಂದರು. 1989ರ ಸಾಲಿನಲ್ಲಿ ಶಿಕ್ಷಣ ನೀಡಿ, ಮಾರ್ಗದರ್ಶನ ಮಾಡಿದ ಶಿಕ್ಷಕರಾದ ಸಿಸ್ಟರ್​ ಸೀರಿನ್​, ಸಿಸ್ಟರ್​ ಲೋವಿಟಾ, ಚಂದನ್​, ಶರಣಮ್ಮ, ರೇಖಾ, ವಾಸಂತಿ, ಅನೀತಾ, ನಾಗೇಂದ್ರ ಬೇಲೂರ, ರಾಯ್​, ಭಾಸ್ಕರ್​, ಮಹ್ಮದ್​ ಖದೀರ್​ ಅವರನ್ನು ಹಖೇ ವಿದ್ಯಾರ್ಥಿಗಳು ಸತ್ಕರಿಸಿದರು. ಹಳೆ ವಿದ್ಯಾರ್ಥಿಗಳಾದ ಶಂಕರಗೌಡ, ನಾಗಮಣಿ, ಕೃಷ್ಣವೇಣಿ, ಪ್ರದಿಪ ಭಾಗಚಿ ಇತರರಿದ್ದರು.