

ಕಮಲಾಪುರ: ಬೌದ್ಧ ಭಾರತೀಯರ ಧರ್ಮವಾಗಿದ್ದು, ಬುದ್ಧನ ತತ್ವದಡಿ ನಾವು ಸಾಗಬೇಕು. ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕುರಿತು ಹೊರತಂದ "ಪ್ರಬುದ್ಧ ನಡೆ' ಸ್ಮರಣ ಸಂಚಿಕೆ ಬಹಳ ಉತ್ತಮವಾಗಿದೆ ಎಂದು ಜಾನಪದ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಟಿ.ಎಂ. ಭಾಸ್ಕರ್ ಹೇಳಿದರು.
ನೂರ್ ಫಂಕ್ಷನ್ ಹಾಲ್ನಲ್ಲಿ ಬುಧವಾರ ಆಯೋಜಿಸಿದ್ದ ಧಮ್ಮಚಕ್ರ ಪ್ರವರ್ತನ ದಿನ ಹಾಗೂ ಡಾ.ಅಂಬೇಡ್ಕರ್ ಜಯಂತಿ ಕುರಿತ ಪ್ರಬುದ್ಧ ನಡೆ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತರ ಮಕ್ಕಳು ಸಂಸ್ಕಾರಯುತ ಶಿಕ್ಷಣ ಪಡೆದು ಮೌಢ್ಯದಿಂದ ದೂರವಿರಬೇಕು. ತಾಲೂಕಿನಲ್ಲಿ ಅಂಬೇಡ್ಕರ್ ಭವನದ ಕೊರತೆಯನ್ನು ಶಾಸಕರು ನೀಗಿಸಬೇಕು ಎಂದು ಮನವಿ ಮಾಡಿದರು.
ಕಾರ್ಮಿಕ ಮುಖಂಡ ಸುನೀಲ್ ಮಾನ್ಪಡೆ ಮಾತನಾಡಿ, ಅಂಬೇಡ್ಕರ್ ವಿಚಾರಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ನಿಂಗಪ್ಪ ಪ್ರಬುದ್ಧಕರ್ ಅಧ್ಯಕ್ಷತೆ ವಹಿಸಿದ್ದರು. ಬೆಳಮಗಿ ಬುದ್ಧ ವಿಹಾರದ ಅಮರಜ್ಯೋತಿ ಭಂತೇಜಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಲಿನಾಥ ಪಾಟೀಲ್, ಸಾಹಿತಿ ಗವಿಸಿದ್ದಪ್ಪ ಪಾಟೀಲ್, ಪಿಎಸ್ಐ ಸುಖಾನಂದ ಸಿಂಗೆ, ಪ್ರಮುಖರಾದ ಜಗದೇವಪ್ಪ ಅಂಕಲಗಿ, ಅಮೃತ ಗೌರೆ, ನರೇಶ ಹರಸೂರ, ಶರಣು ಗೌರೆ, ಆನಂದ ವಾರಿಕ್, ಮಹೇಂದ್ರ ಸಿಂಗೆ, ವಿಜಯಕುಮಾರ ಟೈಗರ್, ಶಿವಕುಮಾರ ದೋಶೆಟ್ಟಿ, ಕುಪೇಂದ್ರ ಹೈಬತಿ, ಸುಧೀರ ಹೊನ್ನಳಿ, ಧರ್ಮವೀರ ಪೋಲಾ, ರವಿ ಬಿ.ಕೆ., ದೇವಿಂದ್ರಪ್ಪ ಕಟ್ಟಿಮನಿ, ನಾಗೇಶ ಭೂಪತಿ ಇತರರಿದ್ದರು.