ಜನರ ಸಮಸ್ಯೆ ನಿವಾರಣೆಗೆ ಕಚೇರಿ ಅನುಕೂಲ

ಚಿತ್ತಾಪುರದ ಪ್ರಜಾಸೌಧ ಕಟ್ಟಣದಲ್ಲಿ ವಿಧಾನ ಪರಿಷತ್​ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಕಚೇರಿಯನ್ನು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ತಿಪ್ಪಣ್ಣಪ್ಪ ಕಮಕನೂರ, ಮುಕ್ತಾರ್​ ಪಟೇಲ್​, ಚಂದ್ರಶೇಖರ ಕಾಶಿ ಇತರರಿದ್ದರು.
ಚಿತ್ತಾಪುರದ ಪ್ರಜಾಸೌಧ ಕಟ್ಟಣದಲ್ಲಿ ವಿಧಾನ ಪರಿಷತ್​ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಕಚೇರಿಯನ್ನು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ತಿಪ್ಪಣ್ಣಪ್ಪ ಕಮಕನೂರ, ಮುಕ್ತಾರ್​ ಪಟೇಲ್​, ಚಂದ್ರಶೇಖರ ಕಾಶಿ ಇತರರಿದ್ದರು.
Published on: 

ಚಿತ್ತಾಪುರ: ಕ್ಷೇತ್ರದಲ್ಲಿನ ಜನರ ಹಾಗೂ ಕೋಲಿ ಸಮುದಾಯದ ಸಮಸ್ಯೆಗಳ ನಿವಾರಣೆಗಾಗಿ ತಾಲೂಕು ಕೇಂದ್ರದಲ್ಲಿ ಕಚೇರಿ ಆರಂಭಿಸಲಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.

ಪ್ರಜಾಸೌಧ ಕಟ್ಟಡದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಧಾನ ಪರಿಷತ್​ ಸದಸ್ಯರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಾರದಲ್ಲಿ ಸೋಮವಾರ ಹಾಗೂ ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಕಚೇರಿಯಲ್ಲಿದ್ದು ಜನರ ಸಮಸ್ಯೆ ಆಲಿಸಲಾಗುವುದು. ಸಮುದಾಯ ಹಾಗೂ ಕಾಂಗ್ರೆಸ್​ ಸಂಟನೆ ಬಲಿಷ್ಠಗೊಳಿಸಲಾಗುವುದು ಎಂದರು.

ಚಿತ್ತಾಪುರದಲ್ಲಿ ಅಂಬಿಗರ ಚೌಡಯ್ಯ ಅವರ ಮೂರ್ತಿ ಅನಾವರಣ ಹಾಗೂ 10 ಸಾವಿರ ಜನರನ್ನು ಸೇರಿಸಿ ಕೋಲಿ ಸಮಾಜದ ದೊಡ್ಡ ಸಮಾವೇಶ ಮಾಡಲಾಗುವುದು. ಕಲಬುರಗಿಯಲ್ಲಿ ಬೃಹತ್​ ಅಂಬಿಗರ ಚೌಡಯ್ಯ ಅವರ ಮೂರ್ತಿ ಅನಾವರಣ ಮಾಡಲು ಸಚಿವ ಸಂಪುಟ ಅನುಮೋದನೆ ಸಿಕ್ಕಿದೆ. ಎನ್​ವಿ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ರ್ಖಗೆ, ಸಿಎಂ ಡಿ.ಕೆ.ಶಿವುಕುಮಾರ್​, ಸಚಿವ ಪ್ರಿಯಾಂಕ್​ ರ್ಖಗೆ ಸೇರಿ ಅನೇಕ ಸಚಿವ, ಶಾಸಕರನ್ನು ಕರೆಸಿ 50 ಸಾವಿರ ಜನರನ್ನು ಸೇರಿಸಿ ಶ್ರೀ ಸಮಾವೇಶ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸುಲಫಲ, ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.

ತಹಸೀಲ್ದಾರ್​ ನಾಗಯ್ಯ ಹಿರೇಮಠ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್​ ಕರದಾಳ, ಪ್ರಮುಖರಾದ ಶರಣಪ್ಪ ನಾಟಿಕಾರ, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಮುಕ್ತಾರ್​ ಪಟೇಲ್​, ಹಣಮಂತ ಸಂಕನೂರ, ಕಾಶಪ್ಪ ಹಲಕರ್ಟಿ, ವಿಠಲ ಕಟ್ಟಿಮನಿ, ಸಾಬಣ್ಣ ಡಿಗ್ಗಿ, ಸಂಜಯ ಬುಳಕರ್​, ಚಂದ್ರು ಚಿತ್ತಣ್ಣ ಇತರರಿದ್ದರು.

ಬೆಂಗಳೂರಿನ ವಿಧಾನಸೌಧ ಎದುರು ಅಂಬಿಗರ ಚೌಡಯ್ಯ ಅವರ ಮೂರ್ತಿ ಅನಾವರಣ ಮಾಡಲು ಸರ್ಕಾರ ಸಮ್ಮಿತಿಸಿದೆ. ಯಾನಾಗುಂದಿ ಮಾತಾ ಮಾಣಿಕೇಶ್ವರಿ ಕ್ಷೇತ್ರವನ್ನು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅಭಿವೃದ್ಧಿಗೊಳಿಸಲಾಗುವುದು. ಕೂಡಲ ಸಂಗಮದಂತೆ ಅಂಬಿಗರ ಚೌಡಯ್ಯ ಅವರ ಐಕ್ಯ ಸ್ಥಳ ಅಭಿವೃದ್ದಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೋಲಿ ಸಮಾಜದ ಜನರು ಕೈಚಾಚಿ ಬೇಡುವವರಲ್ಲ. ಬೇರೆಯವರಿಗೆ ನೀಡುವ ಕೈಗಳಾಗಿದ್ದೇವೆ.
> ತಿಪ್ಪಣ್ಣಪ್ಪ ಕಮಕನೂರ, ವಿಧಾನ ಪರಿಷತ್​ ಸದಸ್ಯ