ರಾಜ್ಯದಲ್ಲಿ ಎನ್ ಡಿಎ ಅಧಿಕಾರಕ್ಕೆ : ಚುನಾವಣೆ ಬಳಿಕ ಸಿಎಂ ಯಾರೆಂದು ನಿರ್ಧಾರ - ಬಿಎಸ್ ವೈ

ರಾಜ್ಯದಲ್ಲಿ ಎನ್ ಡಿಎ ಅಧಿಕಾರಕ್ಕೆ : ಚುನಾವಣೆ ಬಳಿಕ ಸಿಎಂ ಯಾರೆಂದು ನಿರ್ಧಾರ - ಬಿಎಸ್ ವೈ
Published on: 

ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜನರು ಕಂಗೆಟ್ಟಿದ್ದು, ಬಿಜೆಪಿ ಕಡೆ ಒಲವು ಹೊಂದಿದ್ದರಿಂದ ಮುಂದಿನ ಸಲ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಎನ್ ಡಿಎ (NDA) ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ (B S Yediyurappa) ಹೇಳಿದರು.

ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಶಶೀಲ್ ನಮೋಶಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿರುವ. ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಜೆಡಿಎಸ್ ನಮ್ಮ ಮೈತ್ರಿ ಕೂಟ ಅಧಿಕಾರಕ್ಕೆ ಬರುತ್ತದೆ. ಅದರಲ್ಲಿ ಎರಡು ಮಾತಿಲ್ಲ ಎಂದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H D KUMARASWAMY) ಅವರು ಮೈತ್ರಿ ಸರ್ಕಾರದ ಮುಂದಿನ ಸಿಎಂ ಎನ್ನುವ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ

ಬಳಿಕ ಯಾರು ಸಿಎಂ ಆಗುತ್ತಾರೆ ನಿರ್ಧರಿಸಲಾಗುವುದು ಎಂದು ಈಗಾಗಲೇ ಬಿ.ವೈ. ವಿಜಯೇಂದ್ರ ( BY Vijayendra ) ಸ್ಪಷ್ಟಪಡಿಸಿದ್ದಾರೆ. ಮೊದಲು‌ ನಾವು ಒಗ್ಗೂಡಿ ಚುನಾವಣೆಯನ್ನು ಎದುರಿಸುತ್ತೆವೆ ಎಂದರು.

ನಮ್ಮ ಬಳಿ ಬಿಜೆಪಿ (BJP) ಜೆಡಿಎಸ್ (JDS) ಎರಡು ಒಂದೆ ಎಂಬ ಅಭಿಪ್ರಾಯವಿದೆ. (CM)

ಸಿಎಂ ಯಾರಾಗಬೇಕು ಎನ್ನುವುದು ನಂತರ ತೀರ್ಮಾನವಾಗುತ್ತದೆ ಎಂದು ಹೇಳಿದರು.

ಸಿಎಂ ಡಿಕೆ ಶಿವಕುಮಾರ ವಿರುದ್ಧ ವಾಗ್ದಾಳಿ ನಡೆಸಿದರು. ಹಣ ಬಲದಿಂದ ಹೆಂಡದಿಂದ ಎಲ್ಲ ಪಡೆಯುವ ಗುಂಗಿನಲ್ಲಿದ್ದಾರೆ. ಇನ್ಮುಂದೆ ಅದೆಲ್ಲ‌ ನಡೆಯಲ್ಲ ಎಂದು ಯಡಿಯೂರಪ್ಪ ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net