ಉದ್ಯೋಗ ಸ್ಥಳ, ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ಆಂತರಿಕ ದೂರು ಸಮಿತಿ ಖಾತ್ರಿಪಡಿಸುವುದೂ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿ ಕಾರ್ಯಕರ್ತೆಯರು ಕಲಬುರಗಿ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಗುಂಡಮ್ಮ ಮಡಿವಾಳ, ಡಾ.ಸೀಮಾ ದೇಶಪಾಂಡೆ, ರಾಧಾ, ವಿಶಾಲಾಕ್ಷಿ, ಉಷಾ, ರಾಧಿಕಾ, ಶರಣಮ್ಮ ಇತರರಿದ್ದರು.
Published on:
Copied
Follow Us
ಕಲಬುರಗಿ:ಉದ್ಯೋಗ ಸ್ಥಳ, ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ಆಂತರಿಕ ದೂರು ಸಮಿತಿ ಖಾತ್ರಿಪಡಿಸುವುದೂ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿ ಕಾರ್ಯಕರ್ತೆಯರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಇವ ನಮ್ಮವ ಕಾಯ್ದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಸ್ತಿçà ಭ್ರೂಣ ಹತ್ಯೆ, ಬಾಲ್ಯವಿವಾಹ, ಅಪ್ರಾಪ್ತ ವಯಸ್ಕರ ಗರ್ಭಧಾರಣೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು.ಕಾಲೇಜು ಸೇರಿ ಎಲ್ಲ ಕಡೆಗಳಲ್ಲಿ ತೀವ್ರತರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಬಾಲ್ಯವಿವಾಹ ತಡೆಗಟ್ಟಲು ರಾಜ್ಯ ಉಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನ ತಕ್ಷಣ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೆಪಿಎಸ್ ಮ್ಯಾಗ್ನೇಟ್ ಯೋಜನೆ ಕೈಬಿಡಬೇಕು, ಸರ್ಕಾರಿ ಶಾಲೆಗಳನ್ನು ಬಲಪಡಿಸಿ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಖಾತ್ರಿಪಡಿಸಬೇಕು. ಅಶ್ಲೀಲತೆ ಪ್ರಚಾರ, ಮದ್ಯ ಮಾದಕ ವಸ್ತುಗಳ ಹಾವಳಿ ಸಂಪೂರ್ಣ ತಡೆಗಟ್ಟಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾಗುವ ಅಶ್ಲೀಲ ಮತ್ತು ಕ್ರೌರ್ಯ ತುಂಬಿದ ಐಟಂ ಹಾಡುಗಳಿಗೆ ಕಡಿವಾಣ ಹಾಕಬೇಕು. ಆನ್‌ಲೈನ್ ಸುರಕ್ಷತಾ ಕಾಯ್ದೆ ಅಡಿ ಇ-ಸುರಕ್ಷತಾ ಆಯುಕ್ತರನ್ನು ನೇಮಕ ಮಾಡಬೇಕು.ಸಾಮಾಜಿಕ ಮಾಧ್ಯಮ, ಇ-ಮೇಲ್ ಮತ್ತು ಡಿಜಿಟಲ್ ಫ್ಲಾಟ್‌ಫಾರ್ಮ್ಗಳ ಮೂಲಕ ನಡೆಯುವ ಸೈಬರ್ ಸ್ಯಾಂಕಿAಗ್ ನಿಭಾಯಿಸಲು ವಿಶೇಷ ಕಾನೂನು ನಿಯಮ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಹೆಣ್ಣುಮಕ್ಕಳ ಆತ್ಮರಕ್ಷಣೆಗೆ ಜೂಡೋ-ಕರಾಟೆಯಂತಹ ಕೌಶಲ ತರಬೇತಿ ನೀಡಬೇಕು, ಮಹಿಳೆ, ಮಕ್ಕಳ ಮಾರಾಟ ಮತ್ತು ಕಳ್ಳಸಾಗಾಣೆ ತಡೆಗಟ್ಟಬೇಕು. ಅಪೌಷ್ಠಿಕತೆ ತಡೆಯಲು ಮಧ್ಯಾಹ್ನ ಬಿಸಿಯೂಟವನ್ನು ಪದವಿ ಪೂರ್ವ ಕಾಲೇಜುಗಳವರೆಗೂ ವಿಸ್ತರಿಸಬೇಕು. ಉದ್ಯೋಗ ಭದ್ರತೆ ಖಾತ್ರಿಪಡಿಸಿ ಮತ್ತು ಉಚಿತ ಆರೋಗ್ಯ ಸೌಲಭ್ಯ ಒದಗಿಸಬೇಕು, ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಶಿಶುಪಾಲನಾ ಕೇಂದ್ರದAತಹ ಮೂಲಸೌಲಭ್ಯ ಒದಗಿಸಬೇಕು. ಎಲ್ಲ ವಿದ್ಯಾಸಂಸ್ಥೆಗಳಲ್ಲಿ ಪಿಎಚ್‌ಸಿ ನಿರ್ಮಿಸಿ ಸೂಕ್ತ ಆರೋಗ್ಯ ಸೌಲಭ್ಯ ಖಾತ್ರಿಪಡಿಸಬೇಕು ಎಂದು ಹೇಳಿದರು.
ಎಲ್ಲ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಜೀವನ ಯೋಗ್ಯ ಕನಿಷ್ಠ ವೇತನ ಖಾತ್ರಿಪಡಿಸಬೇಕು. ಶಾಲಾ ಮಟ್ಟದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ಆದರ್ಶ ಚೇತನಗಳ ಚರಿತ್ರೆ ಕಡ್ಡಾಯವಾಗಿ ಬೋಧಿಸಬೇಕು, ಫಾಸ್ಟ್ಟ್ರಾÈಕ್ ಕೋರ್ಟ್ಗಳಲ್ಲಿ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಮತ್ತು ಜಸ್ಟೀಸ್ ವರ್ಮಾ ಆಯೋಗದ ಶಿಫಾರಸು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು. ಸಂಘಟನೆ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ್, ಜಿಲ್ಲಾ ಕಾರ್ಯದರ್ಶಿ ಡಾ.ಸೀಮಾ ದೇಶಪಾಂಡೆ, ರಾಧಾ.ಜಿ, ವಿಶಾಲಾಕ್ಷಿ ಪಾಟೀಲ್, ಉಷಾ, ರಾಧಿಕಾ, ಶರಣಮ್ಮ ಇತರರಿದ್ದರು.