ಬೋಗಸ್​ ಬಿಲ್​ ಸೃಷ್ಟಿಸಿ ಹಣ ಲೂಟಿ

 ಗಾರಂಪಳ್ಳಿಯಲ್ಲಿ ವಿಬಿ&ಜಿ ರಾಮ್​ ಜಿ ಯೋಜನೆಯಡಿ ಬೋಗಸ್​ ಬಿಲ್​ ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಚಿಂಚೋಳಿ ತಾಪಂ ಕಚೇರಿ ಎದುರು ವೀರಕನ್ನಡಿಗರ ಸೇನೆಯಿಂದ ಪ್ರತಿಭಟನೆ ನಡೆಸಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು. ಹಣಮಂತ ಭೋವಿ, ಗೋಪಾಲ ಕೊಡಗಟ್ಟಿ, ವಿಠಲ ಕುಸಾಳೆ, ಮಹೇಶ ರಾಣಾಪುರ, ಶಿವಕುಮಾರ ಕಲ್ಲೂರ ಇತರರಿದ್ದರು.
====
ಗಾರಂಪಳ್ಳಿಯಲ್ಲಿ ವಿಬಿ&ಜಿ ರಾಮ್​ ಜಿ ಯೋಜನೆಯಡಿ ಬೋಗಸ್​ ಬಿಲ್​ ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಚಿಂಚೋಳಿ ತಾಪಂ ಕಚೇರಿ ಎದುರು ವೀರಕನ್ನಡಿಗರ ಸೇನೆಯಿಂದ ಪ್ರತಿಭಟನೆ ನಡೆಸಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು. ಹಣಮಂತ ಭೋವಿ, ಗೋಪಾಲ ಕೊಡಗಟ್ಟಿ, ವಿಠಲ ಕುಸಾಳೆ, ಮಹೇಶ ರಾಣಾಪುರ, ಶಿವಕುಮಾರ ಕಲ್ಲೂರ ಇತರರಿದ್ದರು. ====
Published on: 

ಚಿಂಚೋಳಿ: ವಿಬಿ-ಜಿ ರಾಮ್​ ಜಿ ಯೋಜನೆಯಡಿ ಗಾರಂಪಳ್ಳಿಯ ಸರ್ವೇ ನಂ. 184ರಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದೆ, ಸುಮಾರು 10 ಲಕ್ಷ ರೂ. ಹಣ ಲೂಟಿ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹಣಮಂತ ಭೋವಿ ದೂರಿದರು. ಕೆಲಸ ಮಾಡದೆ ಬೋಗಸ್​ ಬಿಲ್​ ಸೃಷ್ಟಿಸಿ ಹಣ ಲೂಟಿ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಕಚೇರಿ ಎದುರು ವೀರಕನ್ನಡಿಗರ ಸೇನೆ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಇಲ್ಲದ ವ್ಯಕ್ತಿಗಳ ಹೆಸರಿಗೆ ಯೋಜನೆ ಹಣ ಜಮೆ ಮಾಡಿ, ಕಾಮಗಾರಿ ಮಾಡದೆ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೇನೆ ತಾಲೂಕು ಅಧ್ಯಕ್ಷ ಗೋಪಾಲ ಕೊಡಗಟ್ಟಿ, ಪ್ರಮುಖರಾದ ವಿಠಲ ಕುಸಾಳೆ, ಮಹೇಶ ರಾಣಾಪುರ, ಶಿವಕುಮಾರ ಕಲ್ಲೂರ, ಗೌತಮ ದಸ್ತಾಪುರ, ಪ್ರಶಾಂತರೆಡ್ಡಿ ಗಡ್ಡಿಮನಿ, ಆಕಾಶ ಚಂದಾಪುರ, ದಯಾಸಾಗರ ಪೋಲಕಪಳ್ಳಿ, ಜಗನ್ನಾಥ ಪೂಜಾರಿ, ರೇವಣಸಿದ್ದಪ್ಪ ಪೂಜಾರಿ ಇತರರಿದ್ದರು.