ಬೇಡಿಕೆ ಈಡೇರಿಕೆಗೆ ಹೋರಾಟ ತೀವ್ರಗೊಳಿಸೋಣ

 ಯಾದಗಿರಿಯಲ್ಲಿ ಭಾನುವಾರ ಆಯೋಜಿಸಿದ್ದ ಪಿಂಚಣಿದಾರರ ಜಿಲ್ಲಾ ಸಮಾವೇಶವನ್ನು ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಉದ್ಘಾಟಿಸಿದರು. ಸಿದ್ದನಗೌಡ ಚೆನ್ನೂರು, ಕೆ.ಟಿ.ಜಾಧವ್​ ಇತರರಿದ್ದರು.
ಯಾದಗಿರಿಯಲ್ಲಿ ಭಾನುವಾರ ಆಯೋಜಿಸಿದ್ದ ಪಿಂಚಣಿದಾರರ ಜಿಲ್ಲಾ ಸಮಾವೇಶವನ್ನು ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಉದ್ಘಾಟಿಸಿದರು. ಸಿದ್ದನಗೌಡ ಚೆನ್ನೂರು, ಕೆ.ಟಿ.ಜಾಧವ್​ ಇತರರಿದ್ದರು.
Published on: 

ಯಾದಗಿರಿ: ಅರೆ ಸರ್ಕಾರಿ ಸಂಸ್ಥೆ, ನಿಗಮಗಳ ನಿವೃತ್ತ ಇಪಿಎಸ್​ 95 ನೌಕರರಿಗೆ ಕನಿಷ್ಠ 7500 ರೂ. ಪಿಂಚಣಿ ನೀಡುವುದು ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ರಾಷ್ಟ್ರೀಯ ಸಂರ್ಷ ಸಮಿತಿ ನೇತೃತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಸಮಿತಿ ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಹೇಳಿದರು.

ಸ್ವಾಮಿ ವಿವೇಕಾನಂದ ನಗರದ ಆಂಜನೇಯ&ತಾಯಮ್ಮ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಷ್ಟ್ರೀಯ ಸಂರ್ಷ ಸಮಿತಿ ಜಿಲ್ಲಾ ಟಕವು ಆಯೋಜಿಸಿದ್ದ ಪಿಂಚಣಿದಾರರ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿ, ಈ ಹಿಂದೆ ಪಿವಿ ನರಸಿಂಹರಾವ್​ ಸರ್ಕಾರ ನೌಕರರಿಗೆ ಇಪಿಎಸ್​&95 ಪರಿಚಯಿಸಿದರು. ಅದರಲ್ಲಿ ನೌಕರರಿಗೆ ನಿವೃತ್ತಿ ನಂತರ ಅನೇಕ ಸೌಲತ್ತು ಕೊಡುವುದಾಗಿ ಪ್ರಕಟಿಸಲಾಗಿತ್ತು. ಆದರೆ ಅಂದಿನ ಸೀಮಿತ ಬದುಕಿನ ಕಾರಣದಿಂದ ನಾವು ಸಂಟಿತರಾಗದೆ ಮತ್ತು ಹೊಸ ಕಾಯ್ದೆ ಬಗ್ಗೆ ತಿಳಿಯದೆ ಇಷ್ಟು ವರ್ಷ ಸುಮ್ಮನೆ ಇದ್ದುದರಿಂದಲ್ಲೇ ಸೌಲಭ್ಯಗಳಿಂದ ವಂಚಿತರಾಗಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಗಿದ್ದು, ಸ್ಪಂದಿಸುವುದಾಗಿ ಭರವಸೆ ನೀಡಿದ್ದರೂ ಇದುವರೆಗೂ ಕಾರ್ಯಗತವಾಗಿಲ್ಲ. ಹೀಗಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಸಮಿತಿ ಜಿಲ್ಲಾಧ್ಯಕ್ಷ ಸಿದ್ದನಗೌಡ ಚೆನ್ನೂರು ಮಾತನಾಡಿ, ಸುಪ್ರೀಂ ನಮ್ಮ ಪರ ತೀರ್ಪು ನೀಡಿದ್ದು, ನಿವೃತ್ತರ ಪಿಂಚಣಿ ಹೆಚ್ಚಳ ಮಾಡಲು 2&3 ಸಲ ಆದೇಶವನ್ನೂ ನೀಡಿದೆ. ಆದರೆ ಇದುವರೆಗೆ ಸರ್ಕಾರ ಬೇಡಿಕೆ ಈಡೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಮುಖಂಡರಾದ ಶಂಕರ ಕುಲಕರ್ಣಿ, ರವಿಗೌಡ ಪಾಟೀಲ್​, ಹೊನ್ನಪ್ಪ ವಡಗೇರಿ ಮಾತನಾಡಿದರು.

ಎನ್​ಎಸಿ ಸಂಟನೆ ಜಿಲ್ಲಾ ಉಪಾಧ್ಯಕ್ಷ ಕೆ.ಟಿ.ಜಾಧವ್​, ಪ್ರಮುಖರಾದ ಬಸವರಾಜ ದೇಸಾಯಿ, ವೆಂಕೋಬ ಭಂಡಾರಿ, ಕಲ್ಲಣ್ಣ ಪ್ಯಾಟಿ, ಬಸವರಾಜ ಮಂಗಿಹಾಳ, ಗಂಗಯ್ಯ ಸ್ವಾಮಿ, ರಾಮರಾವ ಕುಲಕರ್ಣಿ, ಸಂಗನಗೌಡ ಬಾಗೇವಾಡಿ,ಭೀಮಶೇನರಾವ, ಪರಶುರಾಮ ಹಾಗೂ ವಾಡಿ, ಶಹಾಬಾದ್​, ಸೇಡಂ ಸಿಮೆಂಟ್​ ಫ್ಯಾಕ್ಟರಿಗಳ ನಿವೃತ್ತ ನೌಕರರು, ರಾಯಚೂರು, ಕಲಬುರಗಿ ಕೆಎಸ್​ಆರ್​ಟಿಸಿ ನಿವೃತ್ತರು ಸೇರಿ 300ಕ್ಕೂ ಹೆಚ್ಚು ಪಿಂಚಣಿದಾರರು ಭಾಗವಸಿದ್ದರು. ಹೊನ್ನಪ್ಪ ಸ್ವಾಗತಿಸಿದರು. ದೇವಿಂದ್ರಪ್ಪ ಮ್ಯಾಗೇರಿ ನಿರೂಪಣೆ ಮಾಡಿ ವಂದಿಸಿದರು.

ಅನಾಥಾಶ್ರಮ ಸೇರುವ ಸಮಯ ಬಂದಿದೆ

ಬಹುದಿನಗಳಿಂದಲೂ ಕೇವಲ 500 ರಿಂದ 1000 ರೂ. ಮಾತ್ರ ಪಿಂಚಣಿ ಬರುತ್ತಿದೆ. ಇಷ್ಟು ಅಲ್ಪ ಹಣದಲ್ಲಿ ಬದುಕಲು ಸಾಧ್ಯವಿಲ್ಲ. ನಿವೃತ್ತರು ಅನಾಥಾಶ್ರಮ ಸೇರುವ ಪರಿಸ್ಥಿತಿ ಬಂದಿದೆ. ಇಳಿವಯಸ್ಸಿನಲ್ಲಿ ಸ್ವಾವಲಂಬಿ ಜೀವನ ನಡೆಸುವಂತಾಗಲು ಇಪಿಎಸ್​-95 ನೌಕರರ ಪಿಂಚಣಿ ಹೆಚ್ಚಳ ಮಾಡಬೇಕು. ಜತೆಗೆ ಬಿಪಿಎಲ್​ ಕಾರ್ಡ್​, ವೈದ್ಯಕಿಯ ಸೌಲತ್ತು, ತುಟ್ಟಿ ಭತ್ಯೆಗಳು ಹೆಚ್ಚಿಸಬೇಕು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಅವರು ಗಮಹರಿಸಿ ಇಪಿಎಸ್​&95 ಪಿಂಚಣಿದಾರರ ಬೇಡಿಕೆ ಈಡೇರಿಸಬೇಕು ಎಂದು ಎನ್​ಎಸಿ ಸಂಟನೆ ಜಿಲ್ಲಾ ಉಪಾಧ್ಯಕ್ಷ ಕೆ.ಟಿ.ಜಾಧವ್​ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net