

ಶಹಾಬಾದ್: ಮಕ್ಕಳಲ್ಲಿ ಅಪೌಷ್ಟಿತಿಕತೆ ಹೋಗಲಾಡಿಸಲು ಮತ್ತು ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರದ ಅರಿವು ಮೂಡಿಸುವುದು ಅಗತ್ಯವಾಗಿದೆ. ಹುಟ್ಟುವ ಪ್ರತಿ ಮಗುವೂ ದೈಹಿಕ, ಮಾನಸಿಕವಾಗಿ ಆರೋಗ್ಯಪೂರ್ಣವಾಗಿದ್ದರೆ ದೇಶದ ಮಾನವಸಂಪನ್ಮೂಲವಾಗಲು ಸಾಧ್ಯ ಎಂದು ಶಹಾಬಾದ್ ಸಿಡಿಪಿಓ ಶಿವಶರಣಪ್ಪ ಭೋಶೆಟ್ಟಿ ಹೇಳಿದರು.
ರಾವೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, 7 ಅಂಗನವಾಡಿ ಕೇಂದ್ರಗಳಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣಾ ಮಾಸಾಚರಣೆಯಲ್ಲಿ ಮಾತನಾಡಿ, ಪ್ರತಿ ಮಗು ಉತ್ತಮ ಮಾನವ ಸಂಪನ್ಮೂಲವಾಗಿದ್ದಾಗ ಮಾತ್ರ ದೇಶದ ಸದೃಢವಾಗಲು ಸಾಧ್ಯ. ಗರ್ಭಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಂದ ಕೊಡುವ ಪೌಷ್ಟಿಕ ಆಹಾರದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಗ್ರಾಪಂ ಪಿಡಿಓ ಕಾವೇರಿ ರಾಠೋಡ್, ವಿಎ ಶಿಲ್ಪಾ ಸಿಂಪಿ, ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿದರು. ಶಹಾಬಾದ ವಲಯ ಮೇಲ್ವಿಚಾರಕಿ ಶಕುಂತಲಾ ಸಾಕರೆ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರ ರಾಠೋಡ್, ಮೋಹನ ಸೂರೆ ಇತರರಿದ್ದರು.
ಐವರು ಗರ್ಭಿಣಿ ಮಹಿಳೆಯರಿಗೆ ಸೀಮಂತ ನೆರವೇರಿಸಿ, ಮೂರು ಮಕ್ಕಳಿಗೆ ಅನ್ನ ಪ್ರಾಶನ ಮಾಡಿಸಲಾಯಿತು.