ಜೂ.15ರವರೆಗೆ ಕಲಬುರಗಿ ಮೃಗಾಲಯ ಪ್ರವೇಶ ಉಚಿತ

kalaburagi zoo
kalaburagi zoo
Published on
ಕಲಬುರಗಿ: ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದ ಬಳಿ ಲೋಕಾರ್ಪಣೆ ಆಗಿರುವ ಮೃಗಾಲಯದಲ್ಲಿ ನಿರೀತ ಮಟ್ಟದಲ್ಲಿ ಅಪರೂಪದ ಪ್ರಾಣಿ ಪಗಳಿಲ್ಲ ಎಂಬ ವೀಕ್ಷಕರ ಆರೋಪದ ಹಿನ್ನೆಲೆಯಲ್ಲಿ ಮೇ 27ರಿಂದ ಜೂ.15ರವರೆಗೆ ಮೃಗಾಲಯಕ್ಕೆ ಪ್ರವೇಶ ಉಚಿತ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೇ 18ರಂದು ಅದ್ದೂರಿಯಾಗಿ ಲೋಕಾರ್ಪಣೆಯಾಗಿದ್ದ ಮೃಗಾಲಯಕ್ಕೆ ಜನರು ದಂಡು ದಂಡಾಗಿ ಭೇಟಿ ನೀಡುತ್ತಿದ್ದರು. ಆದರೆ ಅಪಾರ ನಿರೀೆಯೊಂದಿಗೆ ಭೇಟಿ ನೀಡುತ್ತಿದ್ದ ಪರಿಸರಾಸಕ್ತರಿಗೆ ಯಾವುದೇ ಅಪರೂಪದ ಪ್ರಾಣಿ ಪಗಳು ಇಲ್ಲದ್ದಕ್ಕೆ ಬೇಸರಿಸಿದ್ದರು. ಕೆಲವರು 75 ರೂ. ಪ್ರವೇಶ ರೂ., ಪಾರ್ಕಿಂಗ್​ಗೆ ಹಣ ಪಡೆದು ಪ್ರಾಣಿಗಳೇ ಇಲ್ಲವೆಂದರೆ ಏಕೆ ಆರಂಭಿಸಿದ್ದೀರಿ ಎಂದು ಪ್ರಶ್ನೆಗಳನ್ನು ಕೇಳಿದ್ದರು. ಇದೀಗ ಅರಣ್ಯ ಇಲಾಖೆ, ಮೃಗಾಲಯ ಅಧಿಕಾರಿಗಳು ಮೇ 27ರಿಂದ ಜೂ.15ರವರೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಉಚಿತ ಪ್ರವೇಶವನ್ನು ನೀಡಲು ನಿರ್ಧರಿಸಿದೆ.
ಜೂ.16ಕ್ಕೆ ಸಿಂಹ ದರ್ಶನ: ಮೃಗಾಲಯದಲ್ಲಿ ಈಗಾಗಲೇ ಬನ್ನೆರುಟ್ಟದಿಂದ ಸಿಂಹವನ್ನು ತಂದಿದ್ದು, ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಹವಾಮಾನ, ಆರೋಗ್ಯದಲ್ಲಿನ ಏರುಪೇರು, ಪರಿಸರಕ್ಕೆ ಹೊಂದಾಣಿಕೆ ಪರಿವೀಕ್ಷಣೆಯಲ್ಲಿ ಸಿಂಹಗಳಿದ್ದು, ಅವುಗಳನ್ನು ಜೂನ್​ 16ಕ್ಕೆ ಸಾರ್ವಜನಿಕರ ವೀಕ್ಷಣಾ ಗ್ಯಾಲರಿಗೆ ಬಿಡಲಾಗುವುದು ಎಂದು ಮೃಗಾಲಯದ ನಾಗೇಶ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net