ನಿಸ್ವಾರ್ಥ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸಿ

ಚಿಂಚೋಳಿ ತಾಲೂಕಿನ ತಾಲೂಕಿನ ಸಾಲೇಬೀರನಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಯಿತು. ಪ್ರಭು ಲೇವಡಿ, ಜಗನ್ನಾಥ ಚಟ್ನಳ್ಳಿ, ಚಂದ್ರಶೇಖರ ಲಗಶೇಟ್ಟಿ, ಆನಂದ ಹಿತ್ತಲ, ಚಂದ್ರಶೇಖರ ಪಾರಾ ಇತರರಿದ್ದರು.
ಚಿಂಚೋಳಿ ತಾಲೂಕಿನ ತಾಲೂಕಿನ ಸಾಲೇಬೀರನಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಯಿತು. ಪ್ರಭು ಲೇವಡಿ, ಜಗನ್ನಾಥ ಚಟ್ನಳ್ಳಿ, ಚಂದ್ರಶೇಖರ ಲಗಶೇಟ್ಟಿ, ಆನಂದ ಹಿತ್ತಲ, ಚಂದ್ರಶೇಖರ ಪಾರಾ ಇತರರಿದ್ದರು.
Published on

ಚಿಂಚೋಳಿ: ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ನಿರಂತರವಾಗಿ ನಡೆಯಲಿ ಎಂದು ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಆಡಕಿ ಹೇಳಿದರು.

ಸಾಲೇಬೀರನಳ್ಳಿ ಹೊರವಲಯದಲ್ಲಿರುವ ಪಾಂಡುರಂಗ ವಿಠಲ ಮಂದಿರದಲ್ಲಿ ಏಕಾದಶಿ ನಿಮಿತ್ತ ಶ್ರೀ ವೀರಮಾರುತಿ ನಾಟ್ಯ ಸಂಘ, ಸುಧೀರ ಕಲಾಬಳಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಲೆ, ಸಂಸ್ಕೃತಿ ಹಾಗೂ ಧಾರ್ಮಿಕತೆ ನಮ್ಮ ಪರಂಪರೆಯ ಜೀವನಾಡಿಗಳಾಗಿದ್ದು, ಇವುಗಳನ್ನು ಉಳಿಸಿ, ಬೆಳೆಸುವಲ್ಲಿ ಕಲಾಬಳಗಗಳ ಪಾತ್ರ ದೊಡ್ಡದಿದೆ ಎಂದರು.

ಪ್ರಮುಖರಾದ ಪ್ರಭು ಲೇವಡಿ, ಜಗನ್ನಾಥ ಚಟ್ನಳ್ಳಿ, ಚಂದ್ರಶೇಖರ ಲಗಶೆಟ್ಟಿ, ಆನಂದ ಹಿತ್ತಲ, ಚಂದ್ರಶೇಖರ ಪಾರಾ, ರಂಗಣ್ಣ ಪೊಲೀಸ್​, ನಾಗಶೆಟ್ಟಿ ಪಾಟೀಲ್​, ಶಾಂತಲಿಂಗಯ್ಯ ಸ್ವಾಮಿ, ಜಗದೇವಿ ಶಿವಪುರಿ, ಜಗನ್ನಾಥ ರಡ್ಡಿ ಚೆಟ್ನಳ್ಳಿ, ಸಂಗಮನಾಥರಡ್ಡಿ ಶೇರಿಕಾರ, ಅಶೋಕ ಕುಮಾರ ಪಾಟೀಲ್​, ರಾಜು ಲೇವಡಿ, ನೀಲಕಂಠೆಪ್ಪ ಪಂಚಾಳ, ಗೋಪಾಲರಡ್ಡಿ ಶೇರಿಕಾರ, ಬಾಬು ಬಂಡಂಪಳ್ಳಿ, ಚೆಂದ್ರಶೇಖರ ಸೋಮಾ, ವೈಜನಾಥ ನೀಲಾ, ಮಡಿವಳಪ್ಪ ಉಳವಿ, ರೇವಣಸಿದ್ದಯ್ಯ ಸ್ವಾಮಿ, ರಾಜಶೇಖರ ಲಗಶೆಟ್ಟಿ, ಚನಶೆಟ್ಟಿ ಪಾಟೀಲ್​, ಚಂದ್ರಶೇಖರ ಲಗಶೆಟ್ಟಿ, ಗೋಪಾಲರಡ್ಡಿ ಬಾಲರಡ್ಡಿ, ಸುದರ್ಶನ ರೆಡ್ಡಿ ನಿಡಗುಂದಾ, ಜಗನ್ನಾಥ ಸೋಮಾ, ಶ್ರೀಕಾಂತ ಲೇವಡಿ, ಜಗನ್ನಾಥ ಮಾಡಗಿ ಇತರರಿದ್ದರು.

ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯ ಶಶಿಕಾಂತ ಆಡಕಿ, ಪತ್ರಕರ್ತ ಶಿವರಾಜ ವಾಲಿ, ನಿವೃತ್ತ ಅಧಿಕಾರಿ ರಾಜಶೇಖರ ಲಗಶೆಟ್ಟಿ ಅವರನ್ನು ಗೌರವಿಸಲಾಯಿತು. ಶಂಕರ ಶಿವಪುರಿ ಅವರಿಂದ ಪ್ರಸಾದ ಸೇವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net