ರಾಷ್ಟ್ರೀಯತೆ ಬೆಳೆಸಲು ಗಣೇಶ ಉತ್ಸವ ಶುರು

 ಚಿತ್ತಾಪುರ ಪಟ್ಟಣದ ವರುಣ ನಗರದ ಶೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶೀ ಮಹಾಗಣಪತಿ ಉತ್ಸವ ಮಂಡಳಿವತಿಯಿಂದ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಶೀ ಮಹಾಗಣಪತಿ ಉತ್ಸವ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ದೇವಸ್ಥಾನ ಟ್ರಸ್ಟ್​ ಅಧ್ಯಕ್ಷ ವಿಜಯಕುಮಾರ್​ ದೇಶಮುಖ್​ ಉದ್ಘಾಟಿಸಿದರು. ಕಂಬಳೇಶ್ವರ ಶ್ರೀ ಭಾರತಿ ದಂಡೋತಿ, ಮೈಪಾಲ್​ ಮೂಲಿಮನಿ, ಬಸವರಾಜಗೌಡ ಮಾಲಿ ಪಾಟೀಲ್​, ನಾಗರಾಜ ನಾಯಕ್​ ಇದ್ದರು.

Published on: 

ಚಿತ್ತಾಪುರ: ಬ್ರಿಟಿಷರ ಆಡಳಿತದಲ್ಲಿ ಸಭೆ-ಸಮಾರಂಭ ನಡೆಸಲು ನಿಷೇಧವಿದ್ದ ಸಂದರ್ಭದಲ್ಲಿ ಜನರಲ್ಲಿ ರಾಷ್ಟ್ರಿಯತೆ ಮತ್ತು ಸ್ವಾತಂತ್ರ್ಯದ ಜಾಗೃತಿ ಮೂಡಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದರು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಹೇಳಿದರು.

ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಹಾಗಣಪತಿ ಉತ್ಸವ ಮಂಡಳಿಯಿಂದ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಮಹಾಗಣಪತಿ ಉತ್ಸವ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿ, ಮನೆಯಲ್ಲಷ್ಟೇ ಆಚರಿಸುತ್ತಿದ್ದ ಗಣೇಶ ಹಬ್ಬವನ್ನು ತಿಲಕರು ಸಾರ್ವಜನಿಕ ಉತ್ಸವವನ್ನಾಗಿ ಪರಿವರ್ತಿಸಿದರು. ಅಂದಿನಿಂದ ದೇಶಾದ್ಯಂತ ಎಲ್ಲರೂ ಒಗ್ಗೂಡಿ ಗಣೇಶನ ಆರಾಧನೆ ಮಾಡಲಾಗುತ್ತಿದೆ ಎಂದರು.

ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ, ಉತ್ಸವ ಮಂಡಳಿ ಅಧ್ಯಕ್ಷ ಮಹಿಪಾಲ್​ ಮೂಲಿಮನಿ ಹೊಸೂರ್​ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ಟ್ರಸ್ಟ್​ ಅಧ್ಯಕ್ಷ ವಿಜಯಕುಮಾರ ದೇಶಮುಖ ಉದ್ಘಾಟಿಸಿದರು.

ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ ನಾಯಕ್​, ಪ್ರಮುಖರಾದ ಅಶೋಕರೆಡ್ಡಿಗೌಡ ಅಲ್ಲೂರ, ಬಸವರಾಜಗೌಡ ಮಾಲಿಪಾಟೀಲ ದಂಡಗುಂಡ, ಬಸವರಾಜಗೌಡ ಮಾಲಿಪಾಟೀಲ ಆಲೂರ, ಶರಣಬಸಪ್ಪ ಗಾರಂಪಳ್ಳಿ, ಜಯಂತ ಕುಲಕರ್ಣಿ, ಶರಣು ಸೂಲಹಳ್ಳಿ, ವಿಶ್ವನಾಥ ರೆಡ್ಡಿ ಇಜಾರ್​, ಕೋಟೇಶ್ವರ ರೇಷ್ಮೆ, ಅಂಬರೀಷ್​ ಸುಲೇಗಾಂವ, ಬಸಲಿಂಗಪ್ಪ ಸಜ್ಜನ್​, ಹಣಮಂತ ದೇಸಾಯಿ, ಮರಲಿಂಗ ದೊಡ್ಡಮನಿ, ವಸಂತ ಕಾಶಿ, ರೋಹಿತ್​ ಚವ್ಹಾಣ, ಪ್ರಭು ಹಲಕರ್ಟಿ, ಶಿವುಕುಮಾರ, ಶರಣು, ಚಂದ್ರಶೇಖರ ಮಾಡಗಿ, ನಾಗೇಂದ್ರ ಹೊಟ್ಟಿ, ನಂದಾ ಭಾವಿಕಟ್ಟಿ ಇತರರಿದ್ದರು.

ಬಸವರಾಜ ಹೊಟ್ಟಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net