ಸ್ವಯಂಪ್ರೇರಿತ ರಕ್ತದಾನ ಮಾಡಿ

ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ಜಾಗೃತಿ ಜಾಥಾಕ್ಕೆ ನ್ಯಾ.ಶ್ರೀನಿವಾಸ ನವಲೆ ಚಾಲನೆ ನೀಡಿದರು. ಡಾ.ಎ.ಎಸ್​.ರುದ್ರವಾಡಿ, ಡಾ.ಶರಣಬಸಪ್ಪ ಗಣಜಲಖೇಡ, ಡಾ.ಶರಣಬಸಪ್ಪ ಕ್ಯಾತನಾಳ, ಡಾ.ರುಖಯ್ಯಾ ಅಸ್ನಾ ರಬಾ, ಡಾ.ಮಹಮ್ಮದ್​ ಗಫಾರ್​ ಇತರರಿದ್ದರು.
ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ಜಾಗೃತಿ ಜಾಥಾಕ್ಕೆ ನ್ಯಾ.ಶ್ರೀನಿವಾಸ ನವಲೆ ಚಾಲನೆ ನೀಡಿದರು. ಡಾ.ಎ.ಎಸ್​.ರುದ್ರವಾಡಿ, ಡಾ.ಶರಣಬಸಪ್ಪ ಗಣಜಲಖೇಡ, ಡಾ.ಶರಣಬಸಪ್ಪ ಕ್ಯಾತನಾಳ, ಡಾ.ರುಖಯ್ಯಾ ಅಸ್ನಾ ರಬಾ, ಡಾ.ಮಹಮ್ಮದ್​ ಗಫಾರ್​ ಇತರರಿದ್ದರು.
Published on: 

ಕಲಬುರಗಿ: ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ಆಪತ್ತಿನಲ್ಲಿರುವ ರೋಗಿಗಳ ಜೀವ ಉಳಿಸಬಹುದು. ನಿಯಮಿತ ರಕ್ತದಾನದಿಂದ ದಾನಿಗಳ ದೇಹದ ಆರೋಗ್ಯವೂ ವೃದ್ಧಿಸಿ, ಚಿಂತೆರಹಿತವಾಗಿ ಬದುಕಲು ನೆರವಾಗುತ್ತದೆ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು.

ಮಾನವೀಯತೆಗೆ ಒಂದು ಹನಿ ರಕ್ತ ನೀಡಿ, ಜೀವ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ಜಾಗೃತಿ ಜಾಥಾಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಅನಗತ್ಯ ಭಯ, ತಪ್ಪು ಕಲ್ಪನೆ ತೊಡೆದು ಹಾಕುವುದು ಅಗತ್ಯ. ರಕ್ತ ನೀಡಲು ಅರ್ಹರಿರುವ ಪ್ರತಿಯೊಬ್ಬರೂ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರಿಗೆ, ಅಪಘಾತ ಆದವರಿಗೆ ಹಾಗೂ ಡಯಾಲಿಸಸ್​ ರೋಗಿಗಳಿಗೆ ರಕ್ತದ ಅವಶ್ಯಕತೆ ತುಂಬಾ ಇದೆ. ಯುವಕರು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಬೇಕು ಎಂದು ಹೇಳಿದರು.

ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿ ಉಪ ನಿರ್ದೇಶಕ ಡಾ.ಎ.ಎಸ್​.ರುದ್ರವಾಡಿ ಮಾತನಾಡಿದರು. 35ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಡಾ.ಶರಣಬಸಪ್ಪ ಗಣಜಲಖೇಡ, ಡಾ.ರುಖಯ್ಯಾ ಅಸ್ನಾ ರಬಾ, ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಡಾ.ಮಹಮ್ಮದ್​ ಗಫಾರ್​ ಇತರರಿದ್ದರು.

ಒಟ್ಟು ಜನಸಂಖ್ಯೆಯಲ್ಲಿ ಕನಿಷ್ಠ ಶೇ.1 ರಕ್ತ ಸಂಗ್ರಹವಾಗುವುದು ಅತ್ಯಗತ್ಯ. ಆರೋಗ್ಯವಂತ ಯುವಜನತೆ ಸ್ವಯಂಪ್ರೇರಿತರಾಗಿ ಮುಂದೆ ಬಂದು, ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆ ನೀಗಿಸಲು ಸಹಕರಿಸಬೇಕು.
> ಡಾ.ಎ.ಎಸ್​.ರುದ್ರವಾಡಿ, ಉಪ ನಿರ್ದೇಶಕ, ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net