ಕೀಳರಿಮೆ ಬಿಟ್ಟು ಬದುಕಿನಲ್ಲಿ ಸಾಧನೆ ಮಾಡಿ

ಡಾ.ಎನ್​.ಜಿ. ಕಣ್ಣೂರ ಕರೆ
ಕಲಬುರಗಿಯಲ್ಲಿ ಆಯೋಜಿಸಿದ್ದ ಎಸ್​.ಎಂ.ತೆಗನೂರ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸ್ವಾಗತ, ಬೀಳ್ಕೊಡುಗೆ ಸಮಾರಂಭವನ್ನು ಡಾ.ಎನ್​.ಜಿ.ಕಣ್ಣೂರ ಉದ್ಘಾಟಿಸಿದರು. ರಾವೇಂದ್ರ ಭಜಂತ್ರಿ, ಡಾ.ಜ್ಯೋತಿ ತೆಗನೂರ, ರವೀಂದ್ರ ತೆಗನೂರ, ಚಂದ್ರಶೇಖರ ಕೌಲಗಾ, ರೇಣುಕಾ ಹಿರೇಮಠ ಇತರರಿದ್ದರು
ಕಲಬುರಗಿಯಲ್ಲಿ ಆಯೋಜಿಸಿದ್ದ ಎಸ್​.ಎಂ.ತೆಗನೂರ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸ್ವಾಗತ, ಬೀಳ್ಕೊಡುಗೆ ಸಮಾರಂಭವನ್ನು ಡಾ.ಎನ್​.ಜಿ.ಕಣ್ಣೂರ ಉದ್ಘಾಟಿಸಿದರು. ರಾವೇಂದ್ರ ಭಜಂತ್ರಿ, ಡಾ.ಜ್ಯೋತಿ ತೆಗನೂರ, ರವೀಂದ್ರ ತೆಗನೂರ, ಚಂದ್ರಶೇಖರ ಕೌಲಗಾ, ರೇಣುಕಾ ಹಿರೇಮಠ ಇತರರಿದ್ದರು
Published on

ಕಲಬುರಗಿ: ವಿದ್ಯಾರ್ಥಿಗಳ ಸಾಧನೆಗೆ ಶಿಸ್ತು, ಶ್ರದ್ಧೆ, ಪರಿಶ್ರಮ ಅವಶ್ಯಕ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎನ್​.ಜಿ.ಕಣ್ಣೂರ್​ ಹೇಳಿದರು.

ಡಾ.ಎಸ್​.ಎಂ.ಪಂಡಿತ ರಂಗಮಂದಿರದಲ್ಲಿ ಎಸ್​.ಎಂ.ತೆಗನೂರು ಪದವಿ ಹಾಗೂ ಪದವಿಪೂರ್ವ ಕಾಲೇಜಿನಿಂದ ಮಂಗಳವಾರ ಆಯೋಜಿಸಿದ್ದ ಸ್ವಾಗತ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಮಕ್ಕಳು ಯಾವುದರಲ್ಲಿಯೂ ಕಡಿಮೆ ಇಲ್ಲ. ಸಾಕಷ್ಟು ಬುದ್ಧಿವಂತರಿದ್ದಾರೆ. ಆದರೆ ಹಿಂಜರಿಕೆ ಭಾವನೆ ಕಾಡುತ್ತಿದ್ದು, ಕೀಳರಿಮೆಯಿಂದ ಹೊರಬಂದು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಸೈಬರ್​ ಕೆಂ ಬ್ರಾಂಚ್​ ಸಿಪಿಐ ರಾವೇಂದ್ರ ಭಜಂತ್ರಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ನಿರಂತರ ಅಧ್ಯಯನ ಅಳವಡಿಸಿಕೊಳ್ಳಬೇಕು. ಅಂದಾಗಲೇ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಪರ್ತಕರ್ತ ಚಂದ್ರಶೇಖರ ಕೌಲಗಾ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿಯೂ ಆದ ಪ್ರಾಚಾಯೆರ್ ಡಾ.ಜ್ಯೋತಿ ತೆಗನೂರ ವಾರ್ಷಿಕ ವರದಿ ಮಂಡಿಸಿದರು. ರವೀಂದ್ರ ತೆಗನೂರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಮೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು.

ಉಪನ್ಯಾಸಕರಾದ ರಾಜೇಶ್ವರಿ ಮುತ್ತಿನ್​, ರೇಣುಕಾ ಹಿರೇಮಠ, ಅನುರಾಧ, ವಸುಧಾ ಕುಲಕರ್ಣಿ, ಸುಸ್ಮಿತಾ, ಪ್ರೀತಿ, ಗುರುದೇವಿ, ಮಹಾದೇವಿ, ಚನ್ನವಿರಯ್ಯ ಮಠಪತಿ, ಸಂತೋಷ ಗುಳ್ಳೆ, ಆಶಿಶ್​, ಅಶೋಕ, ಆದಿತ್ಯ ಮಠ, ರಮೇಶ ಬಡಿಗೇರ ಇತರರಿದ್ದರು.

ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿದ ವಿದ್ಯಾ ಧರ್ಮಶೆಟ್ಟಿ, ಈರಯ್ಯ ಸ್ವಾಮಿ, ಸುವರ್ಣ ಬಸೆಪ್ಪ, ಶ್ರೀನಿವಾಸ, ರೇವತಿ, ಪ್ರಭುಲಿಂಗ ಹೂಗಾರ, ಗುರುಲಿಂಗಪ್ಪ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅನಿತಾ ಬಡಿಗೇರ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದವು. ಭವಾನಿ ಸ್ವಾಗತಿಸಿದರು. ಶ್ವೇತಾ ಹಾಗೂ ಆದಿತ್ಯ ನಿರೂಪಣೆ ಮಾಡಿದರು. ಮಂಜುಳಾ ವಂದಿಸಿದರು.

ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಪರಿಶ್ರಮದ ಜತೆಗೆ ಶಿಸ್ತು ಅತ್ಯಂತ ಅಗತ್ಯ. ನಿರಂತರ ಅಧ್ಯಯನ, ಗುರುಗಳ ಮಾರ್ಗದರ್ಶನದೊಂದಿಗೆ ಸಾಧನೆ ಮಾಡಬೇಕು.
> ಡಾ.ಎನ್​.ಜಿ.ಕಣ್ಣೂರ್​, ನಿರ್ದೇಶಕ, ದೈಹಿಕ ಶಿಕ್ಷಣ ವಿಭಾಗ, ಗುಲ್ಬರ್ಗ ವಿವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net