

ಆಳಂದ: ವಿಶ್ವಕರ್ಮ ಸಮಾಜದ ಯುವಜನಾಂಗ ಶಿಕ್ಷಣದತ್ತ ಹೆಚ್ಚಿನ ಗಮನಹರಿಸಬೇಕು. ತಮ್ಮ ಸಾಂಪ್ರದಾಯಿಕ ಕಲೆ ಮತ್ತು ಕೌಶಲವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮುನ್ನಡೆಸಬೇಕು ಎಂದು ಸರಸಂಬಾದ ಪ್ರಗತಿಪರ ರೈತ ಕಲ್ಯಾಣರಾವ ಪಾಟೀಲ್ ಸಲಹೆ ನೀಡಿದರು.
ಪಟ್ಟಣದ ಹಳೇ ಚೆಕ್ ಪೋಸ್ಟ್ ಹತ್ತಿರದ ರಾಯಲ್ ಪ್ಯಾಲೇಸ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ನಾವೇನಾದರೂ ಸಾಧನೆ ಮಾಡಬೇಕಾದರೆ ಶಿಕ್ಷಣ ಅತ್ಯವಶ್ಯಕವಾಗಿದೆ. ಹೀಗಾಗಿ ಸಮಾಜದವರು ಎಜುಕೇಷನ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ್ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಸಮಾಜ ಬೆಳವಣಿಗೆ ಆಗಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಈ ಸಮಾವೇಶದಿಂದ ಜಾಗೃತಿಗೊಳ್ಳುವುದಲ್ಲದೆ, ಎಲ್ಲರಲ್ಲಿ ಏಕತೆ ಮನೋಭಾವ ಬೆಳೆಯುತ್ತದೆ ಎಂದರು.
ಯಾದಗಿರಿಯ ಶ್ರೀ ಸುರೇಂದ್ರನಾಥ ಸ್ವಾಮೀಜಿ, ಜಿಡಗಾದ ಶ್ರೀ ಡಾ. ಮುರುರಾಜೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿ, ವಿಶ್ವಕರ್ಮರು ಅಪ್ರತಿಮ ವಾಸ್ತು ಶಿಲ್ಪಿಯಾಗಿದ್ದು, ಅಸಾಧರಣ ಅರಮನೆಗಳಿಂದ ಹಿಡಿದು ದೇವರ ಆಯುಧ ಹಾಗೂ ರಥಗಳವರೆಗೆ ಎಲ್ಲವನ್ನೂ ಸೃಷ್ಟಿಸಿದ ವಿನ್ಯಾಸರಾಗಿದ್ದಾರೆ. ದ್ವಾರಕ ಮತ್ತು ಇಂದ್ರ ಪ್ರಸ್ಥದಂತಹ ಪವಿತ್ರ ನಗರಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಇವರದ್ದಾಗಿದೆ ಎಂದು ಬಣ್ಣಿಸಿದರು.
ಅಫಜಲಪುರದ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಮಾದನಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಆಳಂದನ ಶ್ರೀ ಸಿದ್ಧೇಶ್ವರ ಶಿವಾಚಾರ್ಯ, ಶ್ರೀ ಪ್ರಣವಾನಂದ ಸ್ವಾಮೀಜಿ ಸಾನ್ನಿಧ್ಯ, ಸರಸಂಬಾ ಗ್ರಾಪಂ ಮಾಜಿ ಅಧ್ಯೆ ಸುರೇಖಾ ಎನ್. ಸುತಾರ ಅಧ್ಯಕ್ಷತೆ ವಹಿಸಿದ್ದರು. ಕಲಟಗಿಯ ಉದ್ಯಮಿ ಶ್ರೀಶೈಲ ಸುತಾರ ಧ್ವಜಾರೋಹಣ ನೆರವೇರಿಸಿದರು.
ವಿಶ್ವಕರ್ಮ ಸಮಾಜ ತಾಲೂಕು ಅಧ್ಯಕ್ಷ ಬಸವರಾಜ ಕೆ. ವಿಶ್ವಕರ್ಮ, ಮಹಿಳಾ ಟಕದ ತಾಲೂಕು ಅಧ್ಯೆ ವೈಶಾಲಿ ಪೊದ್ದಾರ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಗುರುಶರಣ ಪಾಟೀಲ್ ಕೊರಳ್ಳಿ, ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಜಿಪಂ ಮಾಜಿ ಸದಸ್ಯ ಪೂಜಾರ ಲೋಹಾರ, ಪ್ರಮುಖರಾದ ಲಿಂಗರಾಜ ಪಾಟೀಲ್, ರಮೇಶ ಆರ್. ಮಾಡಿಯಾಳಕರ್, ಮಹಾದೇವ ಪೊದ್ದಾರ, ರವೀರ ಸೋನರ್, ಮನೋಹರ ಎಸ್. ಸೋನಾರ, ರಾಜಕುಮಾರ ಸುತಾರ, ರಾಮಣ್ಣ ಸುತಾರ, ಅಣ್ಣಾರಾವ್ ಪೊದ್ದಾರ, ಗುರುನಾಥ ಸುತಾರ, ಗಣಪತಿ ಎನ್. ಸುತಾರ, ಆನಂದ ಎನ್. ಸುತಾರ, ಲ್ಮಕಾಂತ ಎನ್. ಸುತಾರ, ಸುಧಾಕರ ಸುತಾರ, ಮಲ್ಲಿನಾಥ ಸುತಾರ, ಸಿದ್ರಾಮಪ್ಪ ಎ. ಸುತಾರ ಪಟ್ಟಣ ಇತರರಿದ್ದರು.
ವಿ.ಕೆ. ಸಲಗರದ ಗಂಗಾಧರ ವಿ. ವಿಶ್ವಕರ್ಮ, ದರ್ಗಾಶಿರೂರದ ಅಶೋಕ ಎಲ್. ಸುತಾರ, ಕಲಬುರಗಿಯ ಗಾಯತ್ರಿ ಚ. ಶಿಲ್ಪಿ, ತಾಜಸುಲ್ತಾನಪುರದ ರಮೇಶ ಪಿ. ಬಡಿಗೇರ ಹಾಗೂ ಅಫಜಲಪುರದ ರವಿಕುಮಾರ ಆರ್. ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಡಾ.ಮೋನಪ್ಪ ಎಲ್. ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ವೇದಪಾಠಕ ಸ್ವಾಗತಿಸಿದರು. ಶಿವಲಿಂಗಪ್ಪ ವ್ಹಿ. ಮಂಟಗಿ ಹಾಗೂ ಸುಜ್ಞಾನಿ ಎಂ. ಪೊದ್ದಾರ ನಿರೂಪಣೆ ಮಾಡಿದರು. ವೀರೇಶ ಎಂ. ಪೊದ್ದಾರ ವಂದಿಸಿದರು.