ಸ್ಥಳಿಯ ಸಂಪನ್ಮೂಲದಿಂದ ಸಮೃದ್ಧ ಬದುಕು ಕಟ್ಟಿಕೊಳ್ಳಿ

ಸೇಡಂನಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಸ್ವಸಹಾಯ ಸಂಘಗಳ ರೈತ ಮಹಿಳೆಯರು ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ ತೆರಳಿ ವೀಕ್ಷಿಸಿದರು.
ಸೇಡಂನಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಸ್ವಸಹಾಯ ಸಂಘಗಳ ರೈತ ಮಹಿಳೆಯರು ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ ತೆರಳಿ ವೀಕ್ಷಿಸಿದರು.
Published on: 

ಸೇಡಂ: ರೈತ ಮಹಿಳೆಯರು ನಮ್ಮ ನೆಲದ ಸಂಪನ್ಮೂಲ ಬಳಸಿಕೊಂಡು ಸಮೃದ್ಧ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ವ್ಯವಸ್ಥಾಪಕ ಡಾ.ರಾಜು ತೆಗ್ಗಳ್ಳಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯಿಂದ ತಾಲೂಕಿನ ಸ್ವಸಹಾಯ ಸಂಘಗಳ ರೈತ ಮಹಿಳೆಯರು ಸ್ವ ಉದ್ಯೋಗದ ಕುರಿತು ಅರಿವು ಪಡೆಯಲು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿನ ವಿವಿಧ ಮಾಹಿತಿ ನೀಡಿದ ಅವರು, ಕೃಷಿ ಆಧಾರಿತ ಉದ್ಯಮ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮಹಿಳೆಯರು ಮುಂದಾಗಬೇಕು ಎಂದು ಸಲಹೆ ನೀಡಿದರು. ಈ ವೇಳೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸಂಬಂಧಿತ ಮಾಹಿತಿ, ಸ್ವ ಉದ್ಯೋಗದ ಅವಕಾಶಗಳು ಹಾಗೂ ಆದಾಯವೃದ್ಧಿಗೆ ಪೂರಕವಾದ ತರಬೇತಿ ನೀಡಲಾಯಿತು. ಕಲಬುರಗಿ ಹಾಲು ಒಕ್ಕೂಟಕ್ಕೆ ಭೇಟಿ ನೀಡಿ ಹೈನುಗಾರಿಕೆ ಹಾಗೂ ಹಾಲು ಉತ್ಪಾದನೆಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿ ಪಡೆಯಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಡಾ.ಶ್ರೀನಿವಾಸ, ರಾಹುಲ್​ ರೈತ ಮಹಿಳೆಯರಿಗೆ ಅಗತ್ಯ ಮಾಹಿತಿ ಮತ್ತು ತರಬೇತಿ ನೀಡಿದರು. ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಶಂಕರ ಬಂಡಿ, ಸೇವಾ ಪ್ರತಿನಿಧಿಗಳಾದ ವಾಸಿಯಾ, ಬಿಪಾಶಾ ಹಾಗೂ ಸ್ವಸಹಾಯ ಸಂಘಗಳ ರೈತ ಮಹಿಳಾ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net