ಗುರು ಭಕ್ತಿಯಿಂದ ಶ್ರೇಷ್ಠತೆ ಪಡೆದುಕೊಳ್ಳಿ

ಕಲಬುರಗಿ ಸುಲಫಲ ಮಠದಲ್ಲಿ ಸೋಮವಾರ ಆಯೋಜಿಸಿದ್ದ ವಚನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸುಲಫಲ ಶ್ರೀಗಳನ್ನು ಸತ್ಕರಿಸಲಾಯಿತು. ಹುಬ್ಬಳ್ಳಿ ಮೂರುಸಾವಿರ ಮಠದ ಪೂಜ್ಯರು, ಸೊನ್ನ, ನೆಲೋಗಿ ಶ್ರೀ, ನಿರಗುಡಿ ಶ್ರೀ, ದತ್ತಾತ್ರೇಯ ಪಾಟೀಲ್​, ಅಮರನಾಥ ಪಾಟೀಲ್​, ಪ್ರವಿಣ ಪಾಟೀಲ್​, ಡಾ.ಕಿರಣ ದೇಶಮುಖ, ಬಾಬುರಾವ ಯಡ್ರಾಮಿ, ರಾಜು ಲೇಂಗಟಿ ಇತರರಿದ್ದರು.
ಕಲಬುರಗಿ ಸುಲಫಲ ಮಠದಲ್ಲಿ ಸೋಮವಾರ ಆಯೋಜಿಸಿದ್ದ ವಚನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸುಲಫಲ ಶ್ರೀಗಳನ್ನು ಸತ್ಕರಿಸಲಾಯಿತು. ಹುಬ್ಬಳ್ಳಿ ಮೂರುಸಾವಿರ ಮಠದ ಪೂಜ್ಯರು, ಸೊನ್ನ, ನೆಲೋಗಿ ಶ್ರೀ, ನಿರಗುಡಿ ಶ್ರೀ, ದತ್ತಾತ್ರೇಯ ಪಾಟೀಲ್​, ಅಮರನಾಥ ಪಾಟೀಲ್​, ಪ್ರವಿಣ ಪಾಟೀಲ್​, ಡಾ.ಕಿರಣ ದೇಶಮುಖ, ಬಾಬುರಾವ ಯಡ್ರಾಮಿ, ರಾಜು ಲೇಂಗಟಿ ಇತರರಿದ್ದರು.
Published on
Summary

ಹುಬ್ಬಳ್ಳಿ ಮೂರುಸಾವಿರ ಮಠ ಶ್ರೀಗಳ ಹೇಳಿಕೆ

ಸುಲಫಲ ಮಠದಲ್ಲಿ ವಚನದರ್ಶನ ಪ್ರವಚನ ಉದ್ಘಾಟನೆ

ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಗುರುವಿನ ಮೇಲೆ ಭಕ್ತಿ ಹೊಂದುವ ಮೂಲಕ ಶ್ರೇಷ್ಠ ಪದವಿ ಪಡೆಯಬೇಕು ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ನುಡಿದರು.

ಶಹಾಬಜಾರ್​ ಸುಲಫಲ ಮಠದಲ್ಲಿ ಶ್ರೀಶೈಲ ಸಾರಂಗ ಪೀಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮಿಗಳ 12ನೇ ವರ್ಷದ ಪೀಠಾರೋಹಣ ವಾರ್ಷಿಕೋತ್ಸವ, 60ನೇ ವರ್ಧಂತಿ ಮಹೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ವಚನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸುಲಫಲ ಮಠದ ಶ್ರೀಗಳು ಶಿಷ್ಯರನ್ನು ಪ್ರೀತಿಸುವುದು, ಗುರು-ಶಿಷ್ಯರ ಹೃದಯ ಗೆಲ್ಲುವ ಸ್ವಾಮಿಗಳಾಗಿದ್ದಾರೆ. ಇವರು ಲೀಲಾಮೂರ್ತಿಗಳೂ ಹೌದು. ಇಂತಹ ಸ್ವಾಮಿಗಳು ಇಂದಿನ ದಿನಮಾನಗಳಲ್ಲಿ ಸಿಗುವುದು ಬಲು ಅಪರೂಪ. 60 ವರ್ಷಗಳ ಕಾಲ ಸಮಾಜಕ್ಕಾಗಿ ಶ್ರೇಷ್ಠ ಕೆಲಸ ಮಾಡಿದ್ದಾರೆ. ಬಸವಾದಿ ಶರಣರ ತತ್ವ, ಆದರ್ಶ ಅಳವಡಿಸಿಕೊಂಡು ಈ ನಾಡಿನ ಭಕ್ತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಕ್ತರು ಇಂತಹ ಸ್ವಾಮಿಗಳನ್ನು ಗೌರವಿಸಬೇಕು ಎಂದು ಹೇಳಿದರು.

ಮುಂಡರಗಿ, ಬೈಲೂರಿನ ಜಗದ್ಗುರು ತೋಂಟದಾರ್ಯ ಶಾಖಾ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಪ್ರತಿ ಮನುಷ್ಯನಲ್ಲಿ ಕೃತತಾ ಭಾವ ಅಗತ್ಯ. ಈಗಿನ ಸಮಾಜದಲ್ಲಿ ಮನುಷ್ಯ ಪ್ರೀತಿ ಕುಂಠಿತಗೊಳ್ಳುತ್ತಿದೆ. ಹೀಗಾಗಿ ಮೊದಲು ಮನುಷ್ಯರಾಗುವುದನ್ನು ಕಲಿಯಬೇಕು. ಇತಿಹಾಸ ಪರಂಪರೆ ಉಳಿಸಿ, ಬೆಳೆಸಬೇಕಾಗಿದೆ. ಕೇವಲ ಭೌತಿಕ ಸಂಪತ್ತು ಇದ್ದರೆ ಸಾಲದು, ಗುರುಗಳಲ್ಲಿ ಅಪಾರ ಗೌರವ ಹೊಂದಿರಬೇಕು. ಸುಲಫಲ ಶ್ರೀಗಳು ಸದ್ಭಾವನಾ ಮನೋಭಾವ, ವಿಶಾಲ ಹೃದಯ ಹೊಂದಿದ್ದು, ಪ್ರತಿಭೆಗಳನ್ನು ಬೆಳೆಸುವ ಶಕ್ತಿ ಅವರಲ್ಲಿ ಅಡಗಿದೆ ಎಂದು ಹೇಳಿದರು.

ತತ್ವ ಸಿದ್ಧಾಂತಗಳೊಂದಿಗೆ ನಿಲ್ಲುವುದು ತುಂಬಾ ಕಷ್ಟ. ಆದರೆ ಇತಿಹಾಸ ಹೊಂದಿರುವ ಗುರು ಪರಂಪರೆಯ ಸುಲಫಲ ಮಠದ ಶ್ರೀಗಳು ಜಾತ್ಯತಿತವಾಗಿ ಎಲ್ಲರನ್ನೂ ಸಮಾನವಾಗಿ ಕಂಡು ಈ ಮಠವನ್ನು ಉತ್ತುಂಗದತ್ತ ಬೆಳೆಸಿದ್ದಾರೆ. ಸ್ವಾಮಿಗಳನ್ನು ಸಮಾಜ ತಟಸ್ಥ ಮನೋಭಾವದಿಂದ ಕಾಣಬೇಕು. ನಮ್ಮ ನಾಡಿನ ಮಠಗಳು ಶೈಕ್ಷಣಿಕ ಅಭಿವೃದ್ಧಿಗೆ ತಮ್ಮದೆ ಆದ ಕೊಡುಗೆ ನೀಡಿದ್ದು, ಮನೆ ಮನಕ್ಕೆ ಬೆಳಕು ನೀಡಿವೆ ಎಂದರು.

ನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು ನೇತೃತ್ವ ವಹಿಸಿದ್ದರು. ಸೊನ್ನ ವಿರಕ್ತ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್​ ರೇವೂರ, ಅಮರನಾಥ ಪಾಟೀಲ್​, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್​ ಹರವಾಳ, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಡಾ.ಕಿರಣ ದೇಶಮುಖ, ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷರೂ ಆದ ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ, ಸರ್ಕಾರಿ ನೌಕರರ ಸಂದ ಮಾಜಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಪ್ರಮುಖರಾದ ಸೋನು ಪಟೇಲ್​, ಚಿದಂಬರರಾವ್​ ಪಾಟೀಲ್​, ಶಿವಲಿಂಗಪ್ಪ ಬಂಡಕ್​, ರಾಜು ಕಾಂತಾ ಇತರರಿದ್ದರು.

ಸುಲಫಲ ಮಠ ಧಾರ್ಮಿಕ ಕೇಂದ್ರವಾಗಿದೆ. ಧಾರ್ಮಿಕ, ಶೈಣಿಕವಾಗಿ ಈ ಭಾಗಕ್ಕೆ ಅಪಾರ ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ನಡೆಯಲಿ.
ಅಮರನಾಥ ಪಾಟೀಲ್​, ವಿಧಾನ ಪರಿಷತ್​ ಮಾಜಿ ಸದಸ್ಯ
ಸುಲಫಲ ಮಠ ಅಭಿವೃದ್ಧಿ ಪಡಿಸುವುದರ ಜತೆಗೆ ತಾಜಸುಲ್ತಾನಪುರ, ಘೂಳನೂರ ಮಠಗಳನ್ನು ಬೆಳೆಸಿ ಭಕ್ತರ ಧಾರ್ಮಿಕ ಕಾರ್ಯಕ್ರಮಗಳಿಗೆ ಶ್ರೀಗಳು ಅನುವು ಮಾಡಿಕೊಟ್ಟಿದ್ದಾರೆ. ಶ್ರೀಶೈಲಂ ಸಾರಂಗ ಮಠ ಅಭಿವೃದ್ಧಿಪಡಿಸಿ ಕನ್ನಡ ನಾಡಿನ ಭಕ್ತರಿಗೆ ವಿಶೇಷ ಅವಕಾಶ ಮಾಡಿಕೊಟ್ಟಿದ್ದಾರೆ.
ದತ್ತಾತ್ರೇಯ ಪಾಟೀಲ್​ ರೇವೂರ್​, ಮಾಜಿ ಶಾಸಕ
ಕಲ್ಯಾಣ ನಾಡಿನಲ್ಲಿ ಸಂಸ್ಕೃತಿ ಅಡಗಿದೆ. ಸುಲಫಲ ಶ್ರೀಗಳು ಬುದ್ಧ, ಬಸವ ಹಾಗೂ ಅಂಬೇಡ್ಕರ್​ ತತ್ವ ಅಳವಡಿಸಿಕೊಂಡು ಭಕ್ತರಿಗೆ ಮಾರ್ಗದರ್ಶನ, ಆಶೀರ್ವಾದ ಮಾಡುತ್ತಿದ್ದಾರೆ.
ಪ್ರವಿಣಪಾಟೀಲ್​ ಹರವಾಳ, ಅಧ್ಯಕ್ಷ, ಜೆಸ್ಕಾಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net