

ಶಹಾಬಾದ್: ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ಕುಮಾರ್ ಅವರು ಸಂವಿಧಾನದನ್ವಯ ಕೆಲಸ ಮಾಡದೆ, ಬಿಜೆಪಿ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಆರೋಪಿಸಿದರು.
ಎಸ್ಐಆರ್ ಪ್ರಕ್ರಿಯೆ ರದ್ದು ಮಾಡಬೇಕು, ಸಿಇಸಿ ಜ್ಞಾನೇಶ್ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ನಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೂ ಸಂವಿಧಾನಬದ್ಧವಾದ ಮತದಾನ ಹಕ್ಕು ನೀಡಲಾಗಿದೆ. ಕೇಂದ್ರ ಸರ್ಕಾರ ಇದನ್ನು ಕಸಿದುಕೊಳ್ಳುವ ಮೂಲಕ ಸಂವಿಧಾನ ವಿರೋಧಿ ಕೃತ್ಯ ನಡೆಸುತ್ತಿದೆ ಎಂದು ಕಿಡಿಕಾರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆದ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್ ಮಾತನಾಡಿ, ಎರಡು ಕಡೆ ಮತದಾನ ಹೊಂದಿರುವವರು ಹಾಗೂ ವಿದೇಶಿಯರ ಹೆಸರುಗಳನ್ನು ವೋಟಿಂಗ್ ಲಿಸ್ಟ್ನಿಂದ ತೆಗೆದುಹಾಕಿ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಎಸ್ಐಆರ್ ಹೆಸರಿನಲ್ಲಿ ದಲಿತ, ಅಲ್ಪಸಂಖ್ಯಾತರ ಮತಗಳನ್ನು ಕತ್ತರಿಸುವುದಕ್ಕೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಜಿಲ್ಲಾ ವಕ್ತಾರ ಪೀರ್ಪಾಶಾ ಮಾತನಾಡಿದರು.
ಪ್ರಮುಖರಾದ ಕಿಶನ್ ನಾಯಕ, ಸುರೇಶ ನಾಯಕ, ವಿಜಯಕುಮಾರ ಮುಟ್ಟತ್ತಿ, ಮೃತ್ಯುಂಜಯ ಸ್ವಾಮಿ ಹಿರೇಮಠ, ಶರಣಗೌಡ ಪೊಲೀಸ್ ಪಾಟೀಲ್, ಸೂರ್ಯಕಾಂತ ಕೋಬಾಳ, ಸಾಬೇರಾ ಬೇಗಂ, ಮಾಣಿಕಗೌಡ ಪಾಟೀಲ್, ಹಾಶಮ್ ಖಾನ್, ಡಾ.ಅಹ್ಮದ್ ಪಟೇಲ್, ಮಹ್ಮದ್ ಮಸ್ತಾನ್, ನಾಗರಾಜ ಸಿಂಗೆ, ರಾಜೇಶ ಯನಗುಂಟಿಕರ್, ಶರಣು ಪಗಲಾಪುರ, ದಿಲೀಪ್ ನಾಯಕ, ಅಜೀಮ್ ಸೇಠ, ಮಹ್ಮದ್ ರಫೀಕ್ ಕಾರೋಬಾರಿ, ಕಿರಣ ಚವ್ಹಾಣ್, ಕುಮಾರ ಚವ್ಹಾಣ್, ಮಹ್ಮದ್ ಜಲೀಲ್, ಶೇರ್ ಅಲಿ, ಜಾವೀದ್, ವಸಂತ ಕಾಂಬಳೆ ಇತರರಿದ್ದರು.