ಆರೋಗ್ಯಕರ ಜೀವನಕ್ಕೆ ರಕ್ಷೆ

chn june 21 yoga day. (1)
Published on

ಚನ್ನಗಿರಿ: ಸನಾತನ ಕಾಲದಿಂದಲೇ ಭಾರತೀಯ ಸಂಸ್ಕೃತಿಯೊಳಗೆ ಯೋಗ ಬೆರೆತಿದ್ದು, ಆರೋಗ್ಯಕರ ಜೀವನಕ್ಕೆ ರಕ್ಷೆಯಾಗಿದೆ ಎಂದು ಜೆಎಂಎಫ್​ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಸೌಭಾಗ್ಯ ಬುಷೇರ್ ತಿಳಿಸಿದರು.

ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಯೋಗದಿಂದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು, ನಿತ್ಯ ಜೀವನದಲ್ಲಿ ಒಂದು ಗಂಟೆ ಸಮಯವನ್ನು ಯೋಗ ಮತ್ತು ಪ್ರಾಣಾಯಾಮಕ್ಕೆ ಮೀಸಲಿಡಬೇಕು ಎಂದರು.

ಒತ್ತಡದ ಜೀವನ ರೋಗಗಳನ್ನು ಹೊತ್ತು ತರುತ್ತದೆ, ಇದರಿಂದ ಹೊರಬರಲು ನಿಯಮಿತ ಯೋಗ ಅಭ್ಯಾಸ ಅಗತ್ಯ ಎಂದು ಪ್ರತಿಪಾದಿಸಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ತಾರಕ್ಕ ಮಾತನಾಡಿ, ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ಒಗ್ಗೂಡಿಸುವ ಸಾಧನ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಲಾಯಿತು. ಎಲ್ಲರಿಗೂ ಸಸಿಗಳನ್ನು ವಿತರಿಸಲಾಯಿತು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಶಮಾ ಶ್ರೀವತ್ಸ, ಎರಡನೇ ಹೆಚ್ಚುವರಿ ನ್ಯಾಯಾಧೀಶೆ ಜಿ. ಮಹಾಲಕ್ಷ್ಮೀ, ಎಸಿಪಿ ಸ್ಯಾಮ್ ವರ್ಗೀಸ್, ತಹಸೀಲ್ದಾರ್ ಎನ್.ಜೆ. ನಾಗರಾಜ್, ತುಮ್ೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ತಾಪಂ ಇಒ ಬಿ.ಕೆ. ಉತ್ತಮ್ ಬಿಇಒ ಎಲ್. ಜಯಪ್ಪ, ವಸಂತ, ಗೌಡ್ರು ಜಯಣ್ಣ, ವಕೀಲರ ಸಂಘದ ಅಧ್ಯಕ್ಷ ರಾಜಪ್ಪ ಇದ್ದರು.

ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಪತಂಜಲಿ ಯೋಗ ಕೇಂದ್ರ, ಚನ್ನಮ್ಮಾಜಿ ಯೋಗ ಕೇಂದ್ರ, ಲಯನ್ಸ್ ಕ್ಲಬ್, ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಯುಕ್ತವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net