ಮಲ್ಲಿಗೆ ನಗರಿಯಲ್ಲಿ ಬೆಳಗಾವಿಯ ಗರಿಮೆ ಹೆಚ್ಚಿಸಿದ ಸ್ನೇಹಾ ಕುಲಕರ್ಣಿ

24-Athani-2-Web
Published on

ಅಥಣಿ: ಪಟ್ಟಣದ ನಿವಾಸಿ, ಮೈಸೂರು ವಿ.ವಿ.ಟಾಪರ್ ಸ್ನೇಹಾ ನಾರಾಯಣ ಕುಲಕರ್ಣಿ ಎಂ.ಎಸ್ಸಿ ಭೌತಶಾಸದಲ್ಲಿ 6 ಚಿನ್ನದ ಪದಕ ಪಡೆಯುವ ಮೂಲಕ ಸಾಂಸ್ಕೃತಿಕ ನಗರಿಯಲ್ಲಿ ಕುಂದಾನಗರಿಯ ಗರಿಮೆ ಹೆಚ್ಚಿಸಿದ್ದಾರೆ. ಅ.19ರಂದು ಮೈಸೂರು ವಿವಿಯ 100ನೇ ಘಟಿಕೋತ್ಸವದಲ್ಲಿ ಕುಲಪತಿಗಳಾದ ಪ್ರೊ.ಜಿ.ಹೇಮಂತಕುಮಾರ ಸ್ನೇಹಾಗೆ ಪ್ರಶಸ್ತಿ, ಪ್ರಮಾಣಪತ್ರ ನೀಡಿ ಗೌರವಿಸಿದರು. ಸ್ನೇಹಾ ಎಲ್‌ಕೆಜಿಯಿಂದ ಪದವಿಯವರೆಗೆ ಶಿಕ್ಷಣವನ್ನು ಅಥಣಿ ಪಟ್ಟಣದಲ್ಲಿ, ಉನ್ನತ ಶಿಕ್ಷಣವನ್ನು ಮೈಸೂರು ವಿವಿಯಲ್ಲಿ ಪೂರ್ಣಗೊಳಿಸಿದ್ದಾಳೆ. ಸ್ನೇಹಾ ಸಾಧನೆಗೆ ಪಟ್ಟಣದ ನಿವಾಸಿಗಳು, ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ನನ್ನ ಈ ಸಾಧನೆಗೆ ನಮ್ಮಮ್ಮ ಕಾರಣ. ಸಂಶೋಧನಾ ವಿಭಾಗಕ್ಕೆ ಸೇರಬೇಕು, ಉಪನ್ಯಾಸಕಿಯಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಆಸೆ ಹೊಂದಿದ್ದೇನೆ ಎಂದು ಸ್ನೇಹಾ ತಮ್ಮ ಮನದಾಳ ಹಂಚಿಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net