

ಚಿತ್ರದುರ್ಗ: ಸ್ತ್ರಿ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್(ಐಪಿಪಿಬಿ)ಮೂಲಕ ನಗದು ರ ಹಿತ ವ್ಯವಹಾರ ಮಾಡಬಹುದೆಂದು ಅಂಚೆ ಅಧೀಕ್ಷಕ ಒ.ವಿರುಪಾಕ್ಷಪ್ಪ ಹೇಳಿದರು. ನಗರದ ಶ್ರೀ ಚೌಡೇಶ್ವರಿ ದೇವಾಲಯ ಆವರಣದಲ್ಲಿ ಶುಕ್ರವಾರ ಅಂ ಚೆ ಇಲಾಖೆ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಐಪಿಪಿಬಿ ಖಾತೆ ಕಾರ್ಡ್ ವಿತರಣೆ ಕಾರ‌್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾದ ಆಶಯಕ್ಕೆ ಪೂರಯಕವಾಗಿ ಇಲಾಖೆ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದ ಸ್ಯರಿಗೆ ಅಕೌಂಟ್ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆಧಾರ್ ಕಾರ್ಡ್ ಹಾಗೂ ಹೆಬ್ಬೆಟ್ಟಿನ ಗುರುತು ಕೊಡುವ ಮೂಲಕ ಖಾತೆ ತೆರೆ ಯಬಹುದು. ಅಂಚೆ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಖಾತೆದಾರರಿಂದ 10 ಸಾವಿರ ರೂ.ವರೆಗೂ ಜಮೆ ಹಾಗೂ ಅಥವಾ ಕೊಡಲಿ ದ್ದಾರೆ. ಸ್ಥಳದಲ್ಲೇ ಖಾತೆ ತೆರೆದು ಅಕೌಂಟ್ ನಂ.ಕೊಡಲಾಗುತ್ತದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ದಿನೇಶ್ ಮಾತನಾಡಿ,ಜಿಲ್ಲೆಯಲ್ಲಿ 23 ಸಾವಿರ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿದ್ದು,2.22 ಲಕ್ಷ ಸದಸ್ಯರಿದ್ದಾರೆ. ಇವರಲ್ಲಿ 1.60 ಲಕ್ಷ ಸದಸ್ಯರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಅಂಚೆ ಇಲಾಖೆ ಐಪಿಪಿಬಿ ಕೂಡ ಮಹಿಳೆಯರ ಆರ್ಥಿಕ ಚಟುವಟಿಕೆಗಳಿಗೆ ನೆರವಾಗಲಿದೆ ಎಂದರು.
ಇಲಾಖೆ ಅಧಿಕಾರಿಗಳಾದ ಮಂಜುನಾಥ್,ವಿಜಯಕುಮಾರ್,ರಾಜೇಶ್,ಗ್ರಾಮಾಭಿವೃದ್ಧಿ ಯೋಜನಾ ಧಿಕಾರಿಗಳಾದ ಸ್ವಪ್ನ, ಉಮೇ ಶ್,ವಿಮಾ ಸಮನ್ವಯಾಧಿಕಾರಿ ಕಿರಣ್,ಮೇಲ್ವಿಚಾರಕರಾದ ಜೈಯರಾಂ,ವಿದ್ಯಾ,ಜನಜಾಗೃತಿ ಸಮಿತಿಯ ರೂಪಜನಾರ್ಧನ್,ನಾಗರಾಜ್ ಸಂಗಂ ಇದ್ದರು.