ಪುರಸಭೆ ನೌಕರರಿಂದ ಅನಿರ್ದಿಷ್ಟ ಮುಷ್ಕರ

Indefinite strike by municipal employees
ಗುಳೇದಗುಡ್ಡದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪುರಸಭೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.
Published on

ಗುಳೇದಗುಡ್ಡ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪುರಸಭೆ ಪೌರ ನೌಕರರು ಕಚೇರಿ ಮುಂದೆ ಮಂಗಳವಾರ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಬೇಡಿಕೆ ಈಡೇರಿಕೆಗಾಗಿ 45 ದಿನಗಳ ಗಡುವು ನೀಡಿ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಸರ್ಕಾರ ಸ್ಪಂದಿಸದ ಕಾರಣ ಅನಿವಾರ್ಯವಾಗಿ ಮುಷ್ಕರ ಆರಂಭಿಸಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಜಿಪಿಎ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಸೌಲಭ್ಯ ಹಾಗೂ ಸರ್ಕಾರಿ ನೌಕರರಿಗೆ ದೊರೆಯುವ ಎಲ್ಲ್ಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಡಿ.ಡಿ.ದೊಡಮನಿ, ಉಪಾಧ್ಯಕ್ಷ ಹನುಮಂತ ಉಪ್ಪಾರ, ಹನುಮಪ್ಪ ಮಾದರ, ಎ.ಎಚ್. ಮುದ್ದೇಬಿಹಾಳ, ಬಿ.ಕೆ.ಮಾದರ, ರಮೇಶ ದಡ್ಡಿ, ಪಿ.ಎಂ.ನಡುವಿನಮನಿ, ಎಚ್.ಟಿ. ಮಾದರ, ಡಿ.ಪಿ.ಹಾದಿಮನಿ, ಡಿ.ಡಿ. ದೊಡಮನಿ, ಭೀಮಶಿ ನಡುವಿನಮನಿ, ಎ್.ಡಿ.ವಾಲೀಕಾರ, ಬಿ.ಕೆ.ಪೂಜಾರ, ಐ.ಬಿ.ಮೇಲ್ದಾಪುರ, ಆರ್.ವಿ.ಚಂದರಗಿ, ಚಿನ್ನವ್ವ ಮಾದರ, ಬಾಲವ್ವ ನಡುವಿನಮನಿ ಹಾಗೂ ಪೌರಕಾರ್ಮಿಕರು, ನೌಕರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net