ಕಾಡಾನೆ ತಡೆಬೇಲಿ ಉದ್ಘಾಟನೆಗೆ ಮಳೆ ಅಡ್ಡಿ

Elephant
Published on

ಕಾಸರಗೋಡು: ಕಾಡಾನೆ ದಾಳಿ ಎದುರಿಸಲು ಕಾರಡ್ಕ ಬ್ಲಾಕ್ ಪಂಚಾಯಿತಿ ಆರಂಭಿಸಿರುವ ಸೌರ ಬೇಲಿ ಯೋಜನೆಯ ಮೊದಲ ಹಂತದ ಕಾಮಗಾರಿಯ ಉದ್ಘಾಟನೆಗೆ ಮಳೆ ಅಡ್ಡಿಯಾಗಿದೆ. ಆ.8ರಂದು ಉದಾಘಟನೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ, ಬಿರುಸಿನ ಮಳೆಯ ಕಾರಣದಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಹೊಸ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ತಿಳಿಸಿದ್ದಾರೆ. ದೇಲಂಪಾಡಿ ಪಂಚಾಯಿತಿಯ ಬೆಳ್ಳಕಾನದಿಂದ ಒಲಿಯಕೊಚ್ಚಿವರೆಗಿನ ಎರಡೂವರೆ ಕಿಲೋಮೀಟರ್ ಉದ್ದಕ್ಕೆ ಬೇಲಿ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net