ಕೆಪಿಎಸ್‌ನಲ್ಲಿ ಕೇವಲ 39 ಮಕ್ಕಳು ಪಾಸ್

Kvtl Sslc
ನೀಲಮ್ಮ
Published on

ಕವಿತಾಳ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢಶಾಲೆ)ಯ 122 ವಿದ್ಯಾರ್ಥಿಗಳಲ್ಲಿ ಕೇವಲ 39 ಮಕ್ಕಳು ಪಾಸಾಗಿದ್ದು, ಕಳಪೆ ಸಾಧನೆ ಮಾಡಿದೆ.

ಶರಣಬಸವ ಯಲ್ಲಪ್ಪ ಶೇ.86.96 ಮತ್ತು ಶಿವಕುಮಾರ ನಾಗಪ್ಪ ಶೇ.79.68 ಅಂಕ ಪಡೆದು ಶಾಲೆಗೆ ಪ್ರಥಮ, ದ್ವಿತೀಯ ಸ್ಥಾನ ಪಡೆದಿದ್ದಾರೆ. ಉಳಿದಂತೆ ಶಾಲೆ ಶೇ.31 ಫಲಿತಾಂಶ ಪಡೆದಿದ್ದು, ಶಿಕ್ಷಕರ ಬೋಧನೆ ಬಗ್ಗೆ ಚರ್ಚೆಯಾಗುತ್ತಿದೆ. ಇನ್ನು ಕನ್ಯಾ ಪ್ರೌಢಶಾಲೆಯ 183 ವಿದ್ಯಾರ್ಥಿನಿಯರಲ್ಲಿ 134 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ದೀಪಾ ಬಾಲಪ್ಪ ಶೇ.93.12 ಮತ್ತು ಪೂಜಾ ಚನ್ನಬಸವ ಶೇ.91.84 ಅಂಕ ಪಡೆದಿದ್ದಾರೆ. ಇಲ್ಲಿ 12 ಶಿಕ್ಷಕರಿದ್ದರೂ ಕಳೆದ ವರ್ಷಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ಬಾಗಲವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ 118 ವಿದ್ಯಾರ್ಥಿಗಳಲ್ಲಿ ಕೇವಲ 38 ಮಕ್ಕಳು ಪಾಸಾಗಿದ್ದು, ಶೇ.32 ಫಲಿತಾಂಶ ಲಭಿಸಿದೆ. ಸಲ್ಮಾ ಶೇ.88 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಹಾಲಾಪುರದ ಪ್ರೌಢಶಾಲೆಯಲ್ಲಿ ಒಟ್ಟು 69 ವಿದ್ಯಾರ್ಥಿಗಳಲ್ಲಿ 32 ಸ್ಟೂಡೆಂಟ್ಸ್ ಉತ್ತಿರ್ಣರಾಗಿದ್ದಾರೆ. ಸ್ನೇಹಾ ಕಲ್ಯಾಣ ಬಸವ ಶೇ.77.92 ಅಂಕ ಪಡೆದಿದ್ದಾರೆ. ಶಿಕ್ಷಕರು ಸರಿಯಾಗಿ ಪಾಠ ಮಾಡದಿರುವುದು ಫಲಿತಾಂಶ ಕುಸಿಯಲು ಕಾರಣ ಎಂಬುದು ಪಾಲಕರ ಆರೋಪವಾಗಿದೆ.

ಅಮೀನಗಡದ ಪ್ರೌಢಶಾಲೆಯಲ್ಲಿ ಒಟ್ಟು 85 ವಿದ್ಯಾರ್ಥಿಗಳಲ್ಲಿ 38 ಮಕ್ಕಳು ಉತ್ತೀರ್ಣರಾಗಿದ್ದಾರೆ. ಚಂದ್ರಕಲಾ ಶೇ. 91 ಅಂಕ ಪಡೆದಿದ್ದಾರೆ. ಅದರಂತೆ ಪಾಮನಕಲ್ಲೂರಿನ ಸರ್ಕಾರಿ ಶಾಲೆಯ ಒಟ್ಟು 114 ವಿದ್ಯಾರ್ಥಿಗಳಲ್ಲಿ 60 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶಮೀರ್ ಅಲಿ 588 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕವಿತಾಳದ ಮುರಾರ್ಜಿ ವಸತಿ ಶಾಲೆಯಲ್ಲಿ ಒಟ್ಟು 50 ವಿದ್ಯಾರ್ಥಿಗಳಲ್ಲಿ 41 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. 9 ವಿದ್ಯಾರ್ಥಿಗಳು ಅನ್ನುತ್ತೀರ್ಣರಾಗಿದ್ದಾರೆ. ವಟಗಲ್‌ನ ಮುರಾರ್ಜಿ ವಸತಿ ಶಾಲೆಯಲ್ಲಿ ಒಟ್ಟು 50 ವಿದ್ಯಾರ್ಥಿಗಳಲ್ಲಿ 43 ಮಕ್ಕಳು ಉತ್ತೀರ್ಣರಾಗಿದ್ದು, ಶೇ.86 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದೆ. ವಿದ್ಯಾರ್ಥಿನಿ ನೀಲಮ್ಮ ಸದಾಶಿವಪ್ಪ 608 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net