ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ILK 5-1
Published on

ಇಳಕಲ್ಲ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ವತಿಯಿಂದ ಇಲ್ಲಿಯ ಕೆಪಿಟಿಸಿಎಲ್ ಕಚೇರಿಯಲ್ಲಿ ಇಳಕಲ್ಲ, ನಂದವಾಡಗಿ ಹಾಗೂ ಕರಡಿ ವಿಭಾಗದ ಸಿಬ್ಬಂದಿ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿ, ಸರ್ಕಾರ ಎಲ್ಲ ನೌಕರರ ಮೇಲೆ ಗದಾ ಪ್ರಹಾರ ನಡೆಸಿದ್ದು ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಮಾಡುತ್ತಿದೆ. ಇದರಿಂದ ನೌಕರರ ಪರಿಸ್ಥಿತಿ ಚಿಂತಾಜನಕವಾಗಲಿದ್ದು, ಕೂಡಲೇ ತಿದ್ದುಪಡಿ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿಶಾಲ ಧರೆಪ್ಪಗೋಳ, ಇಬ್ರಾಹಿಂ ಮ್ಯಾಗೇರಿ, ಎಲ್.ಎಸ್. ಗೌಡರ, ಬಸವರಾಜ ಗಾಣದಾಳ, ಗುರು ವಿಶ್ವನಾಥ, ಗಂಗಾಧರ ಮಠ, ಸೈಯದ್ ಚಿಲ್ಲಾಳ, ಆನಂದ ಚವಾಣ್ ಮತ್ತಿತರರು ಪಾಲ್ಗೊಂಡಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net