

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಗುತ್ತಿಗೆ ಪೌರಕಾರ್ವಿುಕರ ನೇರ ವೇತನ ಪಾವತಿ ಮತ್ತು ಕಾಯಂ ನೇಮಕಾತಿಗಾಗಿ ಈ ಹಿಂದಿನ ವಿಧಾನಸಭೆಯ ಅಧಿವೇಶನದಲ್ಲಿ ಹಲವಾರು ಬಾರಿ ಸರ್ಕಾರವನ್ನು ಒತ್ತಾಯಿಸಿದ್ದಾಗಿ ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.
ಮೇಯರ್ ಜ್ಯೋತಿ ಪಾಟೀಲ ಹಾಗೂ ಪಾಲಿಕೆ ಆಯುಕ್ತರಿಗೆ ಇದೇ ಸೆ. 3ರಂದು ಪತ್ರ ಬರೆದು, ಮಹಾನಗರದ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ 700 ಜನರಿಗೆ ಒಬ್ಬ ಪೌರ ಕಾರ್ವಿುಕರ ಅವಶ್ಯಕತೆ ಇದೆ ಎಂದು ತಿಳಿಸಿದ್ದಾಗಿ ಹೇಳಿದ್ದಾರೆ.
ಕೆಲ ತಿಂಗಳ ಹಿಂದೆ ಪಾಲಿಕೆಯ ಸ್ವಚ್ಛತಾ ಕಾರ್ವಿುಕರು ಮುಷ್ಕರ ಕೈಗೊಂಡಿದ್ದರಿಂದ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗಿತ್ತು. ಆ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಅಂದಿನ ಮಹಾಪೌರರು, ಸಭಾ ನಾಯಕರು ಹಾಗೂ ಮುಖಂಡರೊಂದಿಗೆ ತೆರಳಿ, ಸಮಸ್ಯೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುವ ಭರವಸೆ ನೀಡಿದ್ದೆ. ಹಾಗಾಗಿ, ಪೌರ ಕಾರ್ವಿುಕರು ಮುಷ್ಕರ ಕೈಬಿಟ್ಟಿದ್ದರು ಎಂದು ತಿಳಿಸಿದ್ದಾರೆ.
ಪೌರಕಾರ್ವಿುಕ ಸಂಘದವರು ಹಲವು ಬಾರಿ ನನ್ನ ಗೃಹ ಕಚೇರಿಗೆ ಆಗಮಿಸಿ, ನೇರ ವೇತನ ಕುರಿತು ಮನವಿ ನೀಡಿ, ರ್ಚಚಿಸಿದ್ದರು ಎಂದು ತಿಳಿಸಿದ್ದಾರೆ.
ಇದೀಗ ಪೌರಕಾರ್ವಿುಕರ ನೇರ ವೇತನ ಕುರಿತು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರು ಆದೇಶ ಹೊರಡಿಸಿದ್ದು, ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.