ಮನೆ ಬೀಗ ಒಡೆದು ಚಿನ್ನ, ನಗದು ಕದ್ದು ಪರಾರಿ

17 10 2025_BGR_RURAL-PAGE_07
Published on

ದೊಡ್ಡಬಳ್ಳಾಪುರ: ಹೊಸಹುಡ್ಯ ಗ್ರಾಮದಲ್ಲಿ ಬುಧವಾರ ರಾತ್ರಿ ಕಳ್ಳರು ಸೋಮಣ್ಣ ಎನ್ನುವವರ ಮನೆಯ ಬಾಗಿಲು ಒಡೆದು ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದಾರೆ. ಸೋಮಣ್ಣ ಕುಟುಂಬ ಮೊಮ್ಮಗನ ಜನ್ಮದಿನದ ಕಾರಣಕ್ಕೆ ಸುರದೇನಪುರಕ್ಕೆ ತೆರಳಿತ್ತು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಹೊಂಚು ಹಾಕಿರುವ ದುಷ್ಕರ್ಮಿಗಳು ಬಾಗಿಲು ಒಡೆದು 250 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ, ಎಟಿಎಂ ಕಾರ್ಡ್​ಗಳು ಹಾಗೂ 50 ಸಾವಿರ ರೂಪಾಯಿ ಕದ್ದು, ಒಡವೆ ಇಟ್ಟಿದ್ದ ಬ್ಯಾಗ್​ ಹಾಗೂ ಬಾಕ್ಸ್​ಗಳನ್ನು ಮನೆಯ ಸಮೀಪದಲ್ಲಿಯೇ ಎಸೆದು ಹೋಗಿದ್ದಾರೆ. ಗುರುವಾರ ಬೆಳಗ್ಗೆ ಸೋಮಣ್ಣ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net