ಹೇಮಂತ್​ ನಿಂಬಾಳ್ಕರ್​ಗೆ ಮುಖ್ಯಮಂತ್ರಿ ಪದಕ

2kanapur2
Published on

ಖಾನಾಪುರ: ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪೊಲೀಸ್​ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಗುಪ್ತಚರ ಇಲಾಖೆ ಮುಖ್ಯಸ್ಥ, ಹಿರಿಯ ಐಪಿಎಸ್​ ಅಧಿಕಾರಿ ಹೇಮಂತ್​ ನಿಂಬಾಳ್ಕರ್​ ಅವರಿಗೆ ಸಿಎಂ ಸಿದ್ದರಾಮಯ್ಯ ಬುಧವಾರ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿ ಗೌರವಿಸಿದರು.

ನಕ್ಸಲ ಚಳುವಳಿಯ ಸಂಪೂರ್ಣ ನಿಮೂರ್ಲನೆಯಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಗಮನಾರ್ಹ ಸಾಧನೆಗಳನ್ನು ಗುರುತಿಸಿ, ಗುಪ್ತಚರ ಇಲಾಖೆ ಮುಖ್ಯಸ್ಥ ಹೇಮಂತ್​ ನಿಂಬಾಳ್ಕರ್​ ಸೇರಿ ಇಲಾಖೆಯ 22 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಯಿತು.

ಹೇಮಂತ್​ ನಿಂಬಾಳ್ಕರ್​ ದೂರದೃಷ್ಟಿ ಮತ್ತು ಸಾಮಾಜಿಕ ಸಂವೇದನೆ ಕಷ್ಟಕರ ಅಭಿಯಾನ ಯಶಸ್ವಿಗೊಳಿಸಿತು. ನಿಂಬಾಳ್ಕರ್​ 1998ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿ ಕೊಲ್ಲಾಪುರದವರು. ಬೆಳಗಾವಿ ಜಿಲ್ಲೆಯ ಪೊಲೀಸ್​ ಮುಖ್ಯಸ್ಥರಾಗಿ ಗಮನಾರ್ಹ ಕೆಲಸ ಮಾಡಿದ್ದಾರೆ. ಗಲಭೆ ತಡೆ ಮೂಲಕ ಸಮುದಾಯದ ನಡುವೆ ಏಕತೆ ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಹೇಮಂತ್​ ನಿಂಬಾಳ್ಕರ್​ ಅವರು ಬೆಳಗಾವಿ ಜಿಲ್ಲೆಯಲ್ಲಿ ಹಲವು ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿ, ಜಿಲ್ಲೆಗೆ ಗೌರವ ತಂದಿದ್ದಾರೆ. ಗುಪ್ತಚರ ಇಲಾಖೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಹಿರಿಯ ಐಪಿಎಸ್​ ಅಧಿಕಾರಿ ಹೇಮಂತ್​ ನಿಂಬಾಳ್ಕರ್​ ಸೇವೆ ಗುರುತಿಸಿ ಮುಖ್ಯಮಂತ್ರಿ ಪದಕ ನೀಡಿರುವುದು ಸಂತಸವಾಗಿದೆ. > ಡಾ.ಅಂಜಲಿ ನಿಂಬಾಳ್ಕರ್​ ಮಾಜಿ ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net