ಆರೋಗ್ಯ ಬಲವರ್ಧನೆಗೆ ಕ್ರೀಡೆ ಸಹಕಾರಿ

22 YLB 04
ಯಲಬುರ್ಗಾ ತಾಲೂಕಿನ ಚೌಡಾಪುರದಲ್ಲಿ ಆಯೋಜಿಸಿದ್ದ ಸಿಪಿಎಲ್ ಕ್ರಿಕೆಟ್ ಟೂರ್ನಾಮೆಂಟ್‌ಗೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ ಚಾಲನೆ ನೀಡಿದರು. ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ ತಾಳಕೇರಿ, ಗ್ರಾಪಂ ಸದಸ್ಯ ರಮೇಶ ಕುಂಟೋಜಿ, ಪ್ರಮುಖರಾದ ಕರಿಬೀರಪ್ಪ ಗೌಡ್ರ, ಶಿವು ಛತ್ರಗುಡಿ, ಹನುಮೇಶ ಕಲಭಾವಿ ಇದ್ದರು.
Published on

ಯಲಬುರ್ಗಾ: ಯುವಕರು ಟೂರ್ನಾಮೆಂಟ್‌ನಲ್ಲಿ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಕೌಶಲ ಪ್ರದರ್ಶಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ ಹೇಳಿದರು.

ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಿಪಿಎಲ್ ಕ್ರಿಕೆಟ್ ಟೂರ್ನಾಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು.

ದೈಹಿಕ ಮತ್ತು ಮಾನಸಿಕ ಆರೋಗ್ಯ ಬಲವರ್ಧನೆಗೆ ಕ್ರೀಡೆ ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಟೂರ್ನಾಮೆಂಟ್ ಏರ್ಪಡಿಸುವುದರಿಂದ ಸಾಮರಸ್ಯ ಬೆಳೆಯಲು ಕಾರಣವಾಗುತ್ತದೆ. ಯುವಕರು ಹೆಚ್ಚೆಚ್ಚು ಕ್ರೀಡೆಯಲ್ಲಿ ಭಾಗವಹಿಸಲು ಉತ್ಸುಕರಾಗಬೇಕು. ಕ್ರೀಡೆಗಳಲ್ಲಿ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕು ಎಂದರು.

ಪ್ರಮುಖರಾದ ಗವಿ ಹಾವಿನ್, ಪ್ರಭು ಛತ್ರಗುಡಿ, ಶರಣಪ್ಪ ಕರುವಿನ್, ಕಲ್ಯಾಣಕುಮಾರ, ಮಂಜುನಾಥ ಸಿಂಧೋಗಿ, ಮಲ್ಲಣ್ಣ, ಶರಣಪ್ಪ ಕಂದಕೂರ, ಭೀಮನಗೌಡ ಮಾಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net