28ರಂದು ಆರೋಗ್ಯ ಶಿಬಿರ, ಜಾಗೃತಿ ಜಾಥಾ

ಸಿಂಧನೂರಿನ ಪಿಡಬ್ಲ್ಯುಡಿ ಕ್ಯಾಂಪ್ ಬಳಿ ಇರುವ ತಾಯಿ-ಮಕ್ಕಳ ಆಸ್ಪತ್ರೆಯನ್ನು ಶಾಸಕ ಹಂಪನಗೌಡ ಬಾದರ್ಲಿ ವೀಕ್ಷಿಸಿದರು. ಐಎಂಎ ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಸುರೇಶಗೌಡ, ಡಾ.ನಾಗರಾಜ ಕಾಟ್ವಾ ಇದ್ದರು.
ಸಿಂಧನೂರಿನ ಪಿಡಬ್ಲ್ಯುಡಿ ಕ್ಯಾಂಪ್ ಬಳಿ ಇರುವ ತಾಯಿ-ಮಕ್ಕಳ ಆಸ್ಪತ್ರೆಯನ್ನು ಶಾಸಕ ಹಂಪನಗೌಡ ಬಾದರ್ಲಿ ವೀಕ್ಷಿಸಿದರು. ಐಎಂಎ ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಸುರೇಶಗೌಡ, ಡಾ.ನಾಗರಾಜ ಕಾಟ್ವಾ ಇದ್ದರು.
Published on

ಸಿಂಧನೂರು: ದಸರಾ ಉತ್ಸವ ನಿಮಿತ್ತ ನಗರದ ಪಿಡಬ್ಲ್ಯುಡಿ ಕ್ಯಾಂಪ್ ಬಳಿ ಇರುವ ತಾಯಿ-ಮಕ್ಕಳ ಆಸ್ಪತ್ರೆ ಆವರಣದಲ್ಲಿ ಸೆ. 28ರಂದು ನಮ್ಮ ನಡೆ ಆರೋಗ್ಯದ ಕಡೆ ಹಾಗೂ ಬೃಹತ್ ಆರೋಗ್ಯ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂದು ಬೆಳಗ್ಗೆ 6 ಗಂಟೆಗೆ ಜಾಥಾವು ಸಿಂಧನೂರಿನ ತಹಸಿಲ್ ಕಚೇರಿ ಆವರಣದಿಂದ ಹಳೇ ಬಜಾರ್-ಚನ್ನಮ್ಮ ಸರ್ಕಲ್‌ದಿಂದ ದಸರಾ ಉತ್ಸವ ಮೈದಾನದವರೆಗೆ ನಡೆಯಲಿದೆ. ನಂತರ ಆರೋಗ್ಯ ದಸರಾ ಹಿನ್ನೆಲೆಯಲ್ಲಿ ಬೆಳಗ್ಗೆ 9.30 ಕ್ಕೆ ನಗರದ ತಾಯಿ-ಮಕ್ಕಳ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆ, ರಿಮ್ಸ್, ಐಎಂಎ, ಬಾದರ್ಲಿ ಬಸನಗೌಡ ಟ್ರಸ್ಟ್ ಮತ್ತು ಅನ್ನದಾನೇಶ್ವರ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಮುಖ್ಯವಾಗಿ ಕ್ಯಾನ್ಸರ್, ಹೃದಯ, ಕರುಳು, ಮಕ್ಕಳ ತಪಾಸಣೆ, ಚರ್ಮ ತಪಾಸಣೆ ಸೇರಿದಂತೆ ವಿವಿಧ ರೋಗಗಳ ಪರೀಕ್ಷೆಯನ್ನು ನುರಿತ ತಜ್ಞ ವೈದ್ಯರು, ರಾಯಚೂರಿನ ಒಪೆಕ್ ಆಸ್ಪತ್ರೆ ವೈದ್ಯರು ಮಾಡಲಿದ್ದಾರೆ. ಅನ್ನದಾನೇಶ್ವರ ರಕ್ತ ಕೇಂದ್ರದಿಂದ ರಕ್ತದಾನ ಶಿಬಿರವನ್ನೂ ಆಯೋಜಿಸಿದ್ದು, ಜನರು ಭಾಗವಹಿಸಬೇಕೆಂದು ಕೋರಿದರು.

ತಾಲೂಕು ಜನರ ಬಹುದಿನಗಲ ಬೇಡಿಕೆಯಾಗಿದ್ದ ತಾಯಿ-ಮಕ್ಕಳ ಆಸ್ಪತ್ರೆ ಕೂಡ ಹೈಟೆಕ್ ಸೌಲಭ್ಯ, ವೈದ್ಯ ಸಿಬ್ಬಂದಿ ಒಳಗೊಂಡಂತೆ ಸಿದ್ಧಗೊಂಡಿದೆ. ಎಲ್ಲ ಸಿದ್ಧತೆಯೂ ಪೂರ್ಣಗೊಂಡಿದೆ. ಸೆ.27ರಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸುವರು ಎಂದು ತಿಳಿಸಿದರು. ಐಎಂಎ ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಶಗೌಡ, ಡಾ.ನಾಗರಾಜ ಕಾಟ್ವಾ, ಟಿಎಚ್‌ಒ ಡಾ.ಅಯ್ಯನಗೌಡ, ಡಾ.ಶಕುಂತಲಾ ಪಾಟೀಲ್, ಬಸವರಾಜ ಹಿರೇಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net