ಹಾವೇರಿ: ಗಣೇಶ ವಿಸರ್ಜನೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ ವಿವಿಧೆಡೆ ಮದ್ಯಮಾರಾಟ ನಿಷೇಧ ಪರಿಷ್ಕರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಅಕ್ಕಿಆಲೂರ ಹಾಗೂ ಕಲ್ಲಾಪೂರ ಗ್ರಾಮಗಳಲ್ಲಿ ಈ ಮೊದಲು ನಿಗದಿ ಮಾಡಿದ್ದ ಅವಧಿಯನ್ನು ಪರಿಷ್ಕರಿಸಿ ಸೆ.19ರ ಬೆಳಗ್ಗೆ 6ರಿಂದ ಸೆ.20ರ ಬೆಳಗ್ಗೆ 6ರವರೆಗೆ, ಸೆ.28ರ ಬೆಳಗ್ಗೆ 6ರಿಂದ ಸೆ.29ರ ಬೆಳಗ್ಗೆ 6ರವರೆಗೆ ಹಾಗೂ ಸೆ.29ರ ಬೆಳಗ್ಗೆ 6ರಿಂದ ಸೆ.30ರ ಬೆಳಗ್ಗೆ 6ರವರೆಗೆ ಮದ್ಯಮಾರಾಟ ನಿಷೇಧಿಸಲಾಗಿದೆ.
ಚಿಕ್ಕಾಂಶಿ ಹೊಸೂರನಲ್ಲಿ ಈ ಮೊದಲು ನಿಗದಿ ಮಾಡಿದ್ದ ಅವಧಿಯನ್ನು ಪರಿಷ್ಕರಿಸಿ ಸೆ.22ರ ಬೆಳಗ್ಗೆ 6ರಿಂದ ಸೆ.23ರ ಬೆಳಗ್ಗೆ 6ರವರೆಗೆ ಮದ್ಯಮಾರಾಟ ನಿಷೇಧಿಸಲಾಗಿದೆ.