ಪಾಕ್ ಪರ ಘೋಷಣೆ ಕೂಗಿದವರನ್ನು ಪಾಕಿಸ್ತಾನಕ್ಕೆ ಓಡಿಸಿ; ಶರಣಬಸವ ಅಂಗಡಿ

Sharanu Angadi
Published on

ಹಾವೇರಿ: ಪ್ರಜಾಪ್ರಭುತ್ವದ ದೇಗುಲ, ನಾಡಿನ ಶಕ್ತಿಸೌಧ ವಿಧಾನಸೌಧದಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಅಕ್ಷಮ್ಯ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವವರಿಗೆ ಶಿಕ್ಷೆ ಆಗಲೇಬೇಕು.
ನಾಸೀರ್ ಹುಸೇನ್ ರಾಜ್ಯಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ ವಿಧಾನಸೌಧದಲ್ಲೇ ಅವರ ಬೆಂಬಲಿಗರು ಇಂತಹ ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಹೀಗಿದ್ದರೂ ಅದನ್ನು ಮರೆಮಾಚಲು ರಾಜ್ಯ ಸರ್ಕಾರ ತನ್ನ ಬೆಂಬಲಿಗರ ಮೂಲಕ ನಕಲಿ ಆಡಿಯೋ ಸೃಷ್ಟಿಸಿದೆ. ನಾಸೀರ್ ಬಾಯಿ ಜಿಂದಾಬಾದ್ ಎಂದು ತಿರುಚಲು ಹೊರಟಿದೆ. ಇದೇ ನೆಪವಾಗಿ ಇಟ್ಟುಕೊಂಡು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿ ಕಾಲಹರಣ ಮಾಡುತ್ತಿದೆ.
ಶತೃ ರಾಷ್ಟ್ರ ಪಾಕಿಸ್ತಾನ ಹೀನಾಯ ಸ್ಥಿತಿಗೆ ತಲುಪಿದೆ. ಅಲ್ಲಿನ ಜನರಿಗೆ ತಿನ್ನಲು ಸರಿಯಾಗಿ ಅನ್ನ ಸಿಗುತ್ತಿಲ್ಲ. ಅಗತ್ಯ ವಸ್ತುಗಳು ಗಗನಕ್ಕೇರಿವೆ. ಅಲ್ಲಿನ ಘೋರ ಪರಿಸ್ಥಿತಿಗೆ ಜನ ನಲುಗಿ ಹೋಗಿದ್ದಾರೆ. ನರೇಂದ್ರ ಮೋದಿ ಅವರಂಥ ಪ್ರಧಾನಿ ನಮ್ಮ ದೇಶಕ್ಕೆ ಬೇಕು ಎಂದು ಸ್ವತಃ ಪಾಕಿಸ್ತಾನಿಯರೇ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ಕೂಗುವವರು ದೇಶದ್ರೋಗಿಗಳೇ. ಅವರನ್ನು ಮುಲಾಜಿಲ್ಲದೇ ಪಾಕಿಸ್ತಾನಕ್ಕೆ ಓಡಿಸಬೇಕು. ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಾರದೊಳಗೆ ವರದಿ ತರಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು. ಇಲ್ಲದಿದ್ದರೆ ದೇಶಪ್ರೇಮಿಗಳ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಶರಣಬಸವ ಅಂಗಡಿ ಲಾ ಫರ್ಮ್ ಚೇರ್ಮನ್, ವಕೀಲ ಶರಣಬಸವ ಅಂಗಡಿ ಪತ್ರಿಕಾ ಪ್ರಕಟಣೆ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net