ಬಾಂಗ್ಲಾದೇಶದಲ್ಲಿ ಹಿಂದುಗಳ ದೌರ್ಜನ್ಯ ಖಂಡಿಸಿ ಪಂಜಿನ ಮೆರವಣಿಗೆ ಡಿ.6ರಂದು

Published on

ಹಾವೇರಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಜಾಗೃತ ನಾಗರಿಕ ವೇದಿಕೆ ವತಿಯಿಂದ ಡಿ.6ರಂದು ನಗರದಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ನಗರದ ಹುಕ್ಕೇರಿ ಮಠದಲ್ಲಿ ಸಂಜೆ 4 ಗಂಟೆಗೆ ವೇದಿಕೆ ವತಿಯಿಂದ ಸಭೆ ಜರುಗಲಿದೆ. ಸಭೆಯ ನಂತರ ಶ್ರೀಮಠದಿಂದ ಪಂಜಿನ ಮೆರವಣಿಗೆ ಆರಂಭವಾಗಲಿದೆ. ಎಂಜಿ ರಸ್ತೆ ಮಾರ್ಗವಾಗಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ, ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಹಾಗಾಗಿ, ಪ್ರತಿಭಟನೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವೇದಿಕೆಯ ಸಂಚಾಲಕ ಪವನ ಬಹದ್ದೂರ ದೇಸಾಯಿ ಪ್ರಕಟಣೆ ಮೂಲಕ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net