ಆಡೂರ ಗ್ರಾಮದಲ್ಲಿ ದಿಂಡೀ ಉತ್ಸವ 22ರಿಂದ

Published on

ಹಾನಗಲ್ಲ: ತಾಲೂಕಿನ ಆಡೂರ ಗ್ರಾಮದಲ್ಲಿ ಶ್ರೀ ಗುರು ಗೋರಕ್ಷನಾಥ ಸೇವಾ ಸಮಿತಿ ವತಿಯಿಂದ ಶ್ರೀ ಪಾಂಡುರಂಗ ದೇವರ 36ನೇ ವರ್ಷದ ಶ್ರೀ ಮದ್ ಭಗವದ್ಗೀತಾ ಜಯಂತಿ ನಿಮಿತ್ತ ಡಿ.22ರಿಂದ 24ರವರೆಗೆ ದಿಂಡೀ ಉತ್ಸವ ಹಮ್ಮಿಕೊಳ್ಳಲಾಗಿದೆ.
ಡಿ.22ರಂದು ಸಂಜೆ 4 ಗಂಟೆಗೆ ಗೀತಾ ಪೋತಿ ಸ್ಥಾಪನೆ, ಸಂಜೆ 7ರಿಂದ 9ರವರೆಗೆ ಕೀರ್ತನೆ ನಂತರ ಪ್ರಸಾದ ವಿತರಣೆ ನಡೆಯಲಿದೆ. ಡಿ.23ರಂದು ಬೆಳಗ್ಗೆ 4 ಗಂಟೆಯಿಂದ ಕಾಕಡಾರತಿ, ಶೇಷ್ಯಾರತಿ, 6ರಿಂದ ಪಾಂಡುರಂಗ ಮತ್ತು ರುಕ್ಮಿಣಿಗೆ ಅಭಿಷೇಕ, ಗೀತಾ ಪಾರಾಯಣ, ಮಧ್ಯಾಹ್ನ 12ರಿಂದ ಭಜನೆ, ನಾಮಜಪ, ಸಂಜೆ 5.30ಕ್ಕೆ ಪ್ರವಚನ, ಹರಿಪಾಠ, ಕೀರ್ತನೆ ನಂತರ ರಾತ್ರಿ ಸಿದ್ದಾಪುರದ ನಾಗರಾಜ ಜೋಗಿ ತಂಡದಿಂದ ಗೀತಾ ಜಯಂತಿ ಜಾಗರಣೆ, ಭಜನೆ ನಡೆಯಲಿದೆ.
ಡಿ.24ರಂದು ಬೆಳಗ್ಗೆ 4ರಿಂದ ದ್ವಾದಶಿ, ಕಾಕಡಾರತಿ, ಶೆಷ್ಯಾರತಿ, ದಿಂಡಿ ಸೋಹಾಳ, ಪಾಲಕಿ ಉತ್ಸವ ನಗರ ಪ್ರದಕ್ಷಿಣೆ, ಮಧ್ಯಾಹ್ನ 1ಕ್ಕೆ ಸಂತ ಪೂಜಾ ಸಮಾರಾಧನೆ ನಂತರ ಪ್ರಸಾದ ಜರುಗಲಿದೆ ಎಂದು ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net