ಮರಳು ತುಂಬಿದ್ದ ಟಿಪ್ಪರ್ ವಶ

ಗ್ರಾಮಾಂತರ ಠಾಣೆಯ ಆರಕ್ಷಕ ಉಪ ನಿರೀಕ್ಷಕಿ ಎಸ್.ಜೆ.ಲತಾ
ಹೊಳೆನರಸೀಪುರ ತಾಲೂಕಿನ ಉಲಿವಾಲ ಗ್ರಾಮದ ಬಳಿ ಅಕ್ರಮವಾಗಿ ಮರಳು ತುಂಬಿ ನಿಲ್ಲಿಸಿದ್ದ ಲಾರಿಯನ್ನು ವಶಕ್ಕೆ ಪಡೆದಿರುವುದು.
ಹೊಳೆನರಸೀಪುರ ತಾಲೂಕಿನ ಉಲಿವಾಲ ಗ್ರಾಮದ ಬಳಿ ಅಕ್ರಮವಾಗಿ ಮರಳು ತುಂಬಿ ನಿಲ್ಲಿಸಿದ್ದ ಲಾರಿಯನ್ನು ವಶಕ್ಕೆ ಪಡೆದಿರುವುದು.
Published on: 

ಹೊಳೆನರಸೀಪುರ: ಕಾನೂನು ಬಾಹಿರವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಚಾಲಕ, ಮಾಲೀಕ ಹಾಗೂ ಅಕ್ರಮವಾಗಿ ಮರಳು ಸಂಗ್ರಹಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಾಂತರ ಠಾಣೆಯ ಆರಕ್ಷಕ ಉಪ ನಿರೀಕ್ಷಕಿ ಎಸ್.ಜೆ.ಲತಾ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ದೂರು ನೀಡಿದ್ದಾರೆ.

ತಾಲೂಕಿನ ಉಲಿವಾಲ ಬಳಿ ಅಡಿಕೆಕೆರೆ ಹೊಸೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಭಾನುವಾರ ರಾತ್ರಿ ಮರಳು ತುಂಬಿದ ಟಿಪ್ಪರ್ ನಿಲ್ಲಿಸಿರುವ ಕುರಿತು ಮಾಹಿತಿ ಪಡೆದ ಉಪ ನಿರೀಕ್ಷಕಿ ಲತಾ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಜಯನಗರ ಗ್ರಾಮದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪ್ರೊಬೇಷನರಿ ಎಎಸ್‌ಪಿ ಶುಭಂ ಸುರೇಶ್ ಪವಾರ್ ಜತೆಗೂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತಪ್ಪಿತಸ್ಥರ ವಿರುದ್ಧ ಜ್ರಮ ವಹಿಸಲು ಸಂಬಂದಪಟ್ಟ ಇಲಾಖೆಗೆ ಸುಚಿಸುವಂತೆ ಎಎಸ್‌ಪಿ ಸೂಚಿಸಿದ್ದಾರೆ. ಬಳಿಕ ಸಹಾಯಕ ಪೊಲೀಸ್ ಅಧೀಕ್ಷಕಿ ಲತಾ ಹೊಳೆನರಸೀಪುರ ಉಪವಿಭಾಗಾಧಿಕಾರಿಗೆ ಕರೆಮಾಡಿದ್ದು, ಘಟನೆ ಕುರಿತು ವಿವಿರವಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಟಿಪ್ಪರ್ ಅನ್ನು ಮರಳು ಸಮೇತ ವಶಕ್ಕೆ ಪಡೆದು ಠಾಣಾ ಆವರಣಕ್ಕೆ ತಂದು ನಿಲ್ಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net